

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್(Akshay Kumar) ಅವರ ಹೆಸರೊಂದಿಗೆ 90ರ ದಶಕದ ಬಿಟೌನ್ ಬೆಡಗಿಯರ ಹೆಸರು ತಳುಕು ಹಾಕಿಕೊಂಡಿತ್ತು. ಆ ಸಮಯದಲ್ಲಿ ಅವರ ಪ್ರೇಮಕಥೆಯು ಯಾವುದೇ ಸಿನಿಮಾ ಸ್ಟೋರಿಗಿಂತ ಕಡಿಮೆ ಇರಲಿಲ್ಲ. ಹೌದು ನಾವು ಇಲ್ಲಿ ಹೇಳುತ್ತಿರುವುದು ರವೀನಾ ಟಂಡನ್ ಮತ್ತು ಶಿಲ್ಪಾ ಶೆಟ್ಟಿ ಸುಂದರಿಯರೊಂದಿಗೆ ಅಕ್ಷಯ್ ಕುಮಾರ್ ಹೆಸರು ತಳುಕು ಹಾಕಿಕೊಂಡ ಸಮಯವೊಂದಿತ್ತು.
ಇಂದಿಗೂ ಈ ಸುದ್ದಿ ಆಗಾಗ್ಗೆ ಮುನ್ನೆಲೆಗೆ ಬರುತ್ತಿರುತ್ತದೆ. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಇಬ್ಬರು ನಾಯಕರು ತನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು. ಹೆಸರು ಉಲ್ಲೇಖಿಸಿಲ್ಲವಾದರೂ ಆ ಸಮಯದಲ್ಲಿ ಅಭಿಮಾನಿಗಳು ಅಕ್ಷಯ್ ಕುಮಾರ್ ಹೆಸರನ್ನುಊಹಿಸುತ್ತಿದ್ದರು. ಈ ಇಬ್ಬರು ನಟಿಯರ ಪ್ರೇಮಕಥೆಯ ಸುದ್ದಿಗಳು ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿರುವಾಗಲೇ ಅಕ್ಷಯ್ ಕುಮಾರ್ ರಾಜೇಶ್ ಖನ್ನಾ ಅವರ ಮಗಳು ಟ್ವಿಂಕಲ್ ಖನ್ನಾರನ್ನು 2001ರಲ್ಲಿ ವಿವಾಹವಾದರು.
ಇತ್ತೀಚಿಗಿನ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಕ್ಷಯ್ ಕುಮಾರ್, ರವೀನಾ ಟಂಡನ್ ಮತ್ತು ಶಿಲ್ಪಾಶೆಟ್ಟಿ ಅವರೊಂದಿಗಿನ ಪ್ರೀತಿ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಅವರಿಗೆ ರವೀನಾ ಟಂಡನ್ ಜತೆಗೆ ನಿಮ್ಮ ಹೆಸರು ತಳುಕು ಹಾಕಿಕೊಂಡಿದೆ. ನಿಮ್ಮಿಬ್ಬರ ನಡುವೆ ಸುದೀರ್ಘ ಸಂಬಂಧ ಇರುವುದು ನಿಜವೇ ಎಂದು ಕೇಳಲಾಯಿತು. ಅದಕ್ಕೆ ಅಕ್ಷಯ್ ಕುಮಾರ್ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.
ಬಳಿಕ ನಟಿ ಶಿಲ್ಪಾ ಶೆಟ್ಟಿ ಮತ್ತು ನಿಮ್ಮ ಪ್ರೀತಿಯ ವದಂತಿಯು ಇದೆ ಕೇಳಿದಾಗ ಇಲ್ಲಿಯೂ ಹೌದು ಎಂದು ಉತ್ತರಿಸಿದರು.(ಏಜೆನ್ಸೀಸ್)