20 ವರ್ಷಗಳ ನಂತರ ಮಾಜಿ ಬಾಯ್​​ಫ್ರೆಂಡ್​ ಜೊತೆ ಸಿನಿಮಾ ಮಾಡಲು ಓಕೆ ಎಂದ ನಟಿ..!

raaa0
Published on

ಬಾಲಿವುಡ್ ಬ್ಯೂಟಿ ರವೀನಾ ಟಂಡನ್-ಅಕ್ಷಯ್ ಕುಮಾರ್ ಒಂದು ಕಾಲದಲ್ಲಿ ಕಪಲ್ಸ್​​​ ಎಂಬ ವಿಚಾರ ಎಲ್ಲರಿಗೂ ಗೊತ್ತೆಯಿದೆ. ಇದೀಗ 20 ವರ್ಷಗಳ ನಂತರ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಒಂದಾಗುತ್ತಿದ್ದಾರೆ ಅಂದ್ರೆ ಮದುವೆಯಾಗುತ್ತಿದ್ದಾರೆಯೇ? ಅಂತ ಕನ್​​ಫ್ಯೂಸ್​​ ಆಗ್ಬೇಡಿ.


ಹೊಸ ಚಿತ್ರಕ್ಕೆ ರವೀನಾ- ಅಕ್ಷಯ್ ಕುಮಾರ್ ಒಪ್ಪಿಗೆ ನೀಡಿದ್ದಾರೆ. ವೆಲಕಮ್ ಪಾರ್ಟ್ 1 ಮತ್ತು 2 ಸಿನಿಮಾ, ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೀಗ ವೆಲಕಮ್ ಪಾರ್ಟ್ 3 ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರಗಳಾಗಿ ಅಕ್ಷಯ್ ಕುಮಾರ್- ರವೀನಾ ಟಂಡನ್ ನಟಿಸಲು ಓಕೆ ಎಂದಿದ್ದಾರೆ.

ಬಾಲಿವುಡ್ ಬೆಸ್ಟ್ ಜೋಡಿ ಇದೀಗ 20 ವರ್ಷಗಳ ಬಳಿಕ ಈ ಚಿತ್ರಕ್ಕಾಗಿ ಒಂದಾಗುತ್ತಿದೆ.


ಅಕ್ಷಯ್- ರವೀನಾ ಡ್ಯುಯೇಟ್ ಹಾಡಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಚಿತ್ರತಂಡಕ್ಕೆ ಯಾರೆಲ್ಲಾ ಕಲಾವಿದರು ಸಾಥ್ ಕೊಡುತ್ತಾರೆ ಅನ್ನೋ ಮಾಹಿತಿ ಸದ್ಯದಲ್ಲೇ ಗೊತ್ತಾಗಲಿದೆ. ರವೀನಾ ಜೊತೆಗಿನ ಬ್ರೇಕಪ್ ನಂತರ ಶಿಲ್ಪಾ ಶೆಟ್ಟಿ ಜೊತೆ ಅಕ್ಷಯ್ ಎಂಗೇಜ್ ಆಗಿದ್ರು.

ಅದ್ಯಾಕೋ ಈ ಸಂಬಂಧ ಕೂಡ ಕೂಡಿ ಬರಲಿಲ್ಲ. ನಂತರ ಟ್ವಿಂಕಲ್ ಖನ್ನಾ ಜೊತೆ ಅಕ್ಷಯ್ ಮದುವೆಯಾದರು.


ಹೊಸ ಬಗೆಯ ಕಥೆಯಲ್ಲಿ ಅಕ್ಷಯ್- ರವೀನಾ ಡ್ಯುಯೇಟ್ ಹಾಡಲಿದ್ದಾರೆ ಎಮಬ ಮಾಹಿತಿಯಷ್ಟೆ ದೊರೆತಿದ್ದು, ಶೀಘ್ರದಲ್ಲೇ ಸಿನಿಮಾ ಶೂಟಿಂಗ್​ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net