

ಚನ್ನರಾಯಪಟ್ಟಣ : ಅಯೋಧ್ಯೆಯ ಶ್ರೀ ರಾಮ ಮಂದಿರದ ಪವಿತ್ರೀಕರಣಕ್ಕಾಗಿ ನಡೆಸುವ ವಿಧಿ ವಿಧಾನಗಳಲ್ಲೊಂದಾದ ಅಕ್ಷತಾ ಪೂಜೆ’ ಕಾರ್ಯಕ್ರಮದ ಮಂತ್ರಾಕ್ಷತೆಯನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಅಯೋಧ್ಯೆಯ ರಾಮ ಮಂದಿರದಲ್ಲಿ ಜ. 22ರಂದು ರಾಮನ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು ಆ ಪ್ರಯುಕ್ತ ಅಯೋಧ್ಯೆಯಿಂದ ಬಂದ ರಾಮನ ಭಾವಚಿತ್ರ, ಆಹ್ವಾನ ಪತ್ರಿಕೆ ಹಾಗೂ ಮಂತ್ರಾಕ್ಷತೆಗೆ ಪಟ್ಟಣದ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಾಲೂಕು ಸಂಯೋಜಕ ಸಿ.ಎಸ್. ಮನೋಹರ ಸ್ವಾಗತಿಸಿದರು. ನಂತರ ಅವರು ಮಾತನಾಡಿ, ದೇಶಾದ್ಯಂತ ಅಕ್ಷತೆ ವಿತರಣೆ ಅಭಿಯಾನ ಜ.1ರಿಂದ 15ರ ತನಕ ನಡೆಯಲಿದೆ. ಅಭಿಯಾನದ ಯಶಸ್ಸಿಗೆ ಡಿ. 14ರಂದ ಮಧ್ಯಾಹ್ನ 2.30ಕ್ಕೆ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಆರ್‌ಎಸ್‌ಎಸ್ ನಗರ ಸಂಘ ಚಾಲಕ ಡಾ. ಶೇಷ ಶಯನ, ಕುಟುಂಬ ಪ್ರಬೋಧನದ ಮುಖ್ಯಸ್ಥ ಪ್ರಕಾಶ್,
ಮಹಿಳಾ ಘಟಕ ಸಂಘಟಕಿ ಯಶೋದಾ ಜೈನ್, ರೈತ ಮಹಿಳಾ ಮೋರ್ಚಾದ ಪ್ರೇಮಮ್ಮ, ಮುಖಂಡರಾದ ಧರಣೀಶ, ಜಗದೀಶ, ಕುಸುಮಾ, ಸುರೇಶ ಇತರರು ಉಪಸ್ಥಿತರಿದ್ದರು.