VIDEO | ಮುಂಜಾಗ್ರತಾ ಕ್ರಮವಾಗಿ 90 ಮೀಟರ್ ಎತ್ತರದ ಗೋಪುರವನ್ನು ಕೆಡವಿದ ಆಕಾಶವಾಣಿ

akashwani tower
Published on

ದ್ವಾರಕಾ: ಬಿಪರ್​ಜಾಯ್​ ಚಂಡಮಾರುತ ತೀವ್ರವಾಗಿರುವ ಹಿನ್ನೆಲೆಯಲ್ಲಿ 90 ಮೀಟರ್ ಎತ್ತರದ ಆಕಾಶವಾಣಿ ಗೋಪುರವನ್ನು ಮುಂಜಾಗ್ರತಾ ಕ್ರಮವಾಗಿ ಕಿತ್ತು ಹಾಕಲಾಗಿರುವ ಘಟನೆ ಗುಜರಾತ್‌ನ ದ್ವಾರಕಾದಲ್ಲಿ ನಡೆದಿದೆ.

ಇದನ್ನೂ ಓದಿ: ಮಾರಿಗೆ ದಾರಿಬಿಡಿ; ರಾಜ್ ನಿರ್ದೇಶನದ ಹೊಸ ಚಿತ್ರದ ಸ್ಟ್ ಲುಕ್

ಬಿಪರ್​ಜಾಯ್ ಚಂಡಮಾರುತ ಗುರುವಾರದಂದು ಕಚ್ ಮತ್ತು ಸೌರಾಷ್ಟ್ರ ಪ್ರದೇಶಗಳಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಗುಜರಾತ್‌ನ ದ್ವಾರಕಾದಲ್ಲಿ ಉಕ್ಕಿನ ಹಗ್ಗಗಳಿಂದ ಬೆಂಬಲದಿಂದ ಅಲುಗಾಡದೇ ನಿಂತಿದ್ದ 90 ಮೀಟರ್ ಎತ್ತರದ ಪ್ರಸರಣ ಗೋಪುರವನ್ನು ಕೆಡವಿದ್ದೇವೆ. ದುರ್ಘಟನೆಯನ್ನು ತಡೆಗಟ್ಟಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವ, ಆಸ್ತಿ-ಪಾಸ್ತಿ ಹಾನಿಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕಾಶವಾಣಿ ತಿಳಿಸಿದೆ. 

ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ದ್ವಾರಕಾದಿಂದ ಆಕಾಶವಾಣಿ ಸೇವೆಗಳನ್ನು ಮರುಸ್ಥಾಪಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ಕಳೆದ ಜನವರಿಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೂರತ್‌ನ ರಚನಾತ್ಮಕ ತಜ್ಞರು ಮತ್ತು ಪ್ರಸಾರ ಭಾರತಿಯ ನಾಗರಿಕ ನಿರ್ಮಾಣ ವಿಭಾಗವು, ಈ ಗೋಪುರದ ರಚನೆಯ ಸುರಕ್ಷತಾ ಲೆಕ್ಕಪರಿಶೋಧನೆಯ ನಂತರ 35 ವರ್ಷಗಳಷ್ಟು ಹಳೆಯದಾದ ಗೋಪುರವನ್ನು ಕೆಡವಲು ಶಿಫಾರಸು ಮಾಡಿತ್ತು.

ಗುರುವಾರ ದ್ವಾರಕಾ, ಕಚ್, ಪೋರಬಂದರ್, ಜಾಮ್‌ನಗರ, ರಾಜ್‌ಕೋಟ್, ಜುನಾಗಢ್ ಮತ್ತು ಗುಜರಾತ್‌ನ ಮೊರ್ಬಿ ಜಿಲ್ಲೆಗಳಲ್ಲಿ ಗಂಟೆಗೆ 125-135 ಕಿಮೀ ವೇಗದಲ್ಲಿ ಮತ್ತು ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net