ಗ್ರಾಹಕರಿಗೆ ಶಾಕ್ ಕೊಟ್ಟ ಏರ್​ಟೆಲ್! ಅಗ್ಗದ ರಿಚಾರ್ಜ್ ಪ್ಲಾನ್ ಕಿತ್ತು ಹಾಕಿದ ಸಂಸ್ಥೆ

airtel
Published on

ನವದೆಹಲಿ: ಟೆಲಿಕಾಂ ಸಂಸ್ಥೆಯಾಗಿರುವ ಏರ್​ಟೆಲ್ ಸಂಸ್ಥೆಯು ಬುಧವಾರದಂದು ಗ್ರಾಹಕರಿಗೆ ಒಂದು ಶಾಕ್ ನೀಡಿದೆ. ಈವರೆಗೆ ಇದ್ದ 49 ರೂಪಾಯಿಯ ಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ತೆಗೆದುಹಾಕಿರುವುದಾಗಿ ಸಂಸ್ಥೆ ತಿಳಿಸಿದೆ.

ಇನ್ನು ಮುಂದೆ ಏರ್​ಟೆಲ್ ಗ್ರಾಹಕರು 49 ರೂಪಾಯಿ ಮಾಸಿಕ ರಿಚಾರ್ಜ್ ಮಾಡುವ ಅವಕಾಶವಿರುವುದಿಲ್ಲ. ಪ್ರಿ ಪೇಯ್ಡ್ ಸಿಮ್ ಬಳಸುವವರಿಗೆ ಆರಂಭಿಕ ಯೋಜನೆಯೇ 79 ರೂಪಾಯಿಯಿಂದ ಆರಂಭವಾಗಲಿದೆ. 79 ರೂಪಾಯಿ ರಿಚಾರ್ಜ್ ಮಾಡಿದರೆ, 28 ದಿನಗಳಿಗೆ 64 ರೂಪಾಯಿ ಟಾಕ್​ಟೈಮ್ ಹಾಗೂ 200 ಎಂಬಿ ಡೇಟಾ ಕೊಡಲಾಗುವುದು. ಈ ಹಿಂದಿನ 49 ರೂಪಾಯಿ ರಿಚಾರ್ಜ್​ನಲ್ಲಿ 38 ರೂಪಾಯಿ ಟಾಕ್​ಟೈಮ್ ಹಾಗೂ 100 ಎಂಬಿ ಡೇಟಾ ಸಿಗುತ್ತಿತ್ತು. ಗ್ರಾಹಕರು ಹೆಚ್ಚು ಸಮಯ ಮಾತನಾಡುವ ಅವಕಾಶ ಸಿಗಲಿ ಎಂದು 49 ರೂಪಾಯಿ ಯೋಜನೆ ಬದಲು 79 ರೂಪಾಯಿ ಯೋಜನೆ ಜಾರಿಗೆ ತಂದಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಈ ಯೋಜನೆಯು ಇದೇ ತಿಂಗಳು 29ರಿಂದಲೇ ಜಾರಿಯಲ್ಲಿದೆ. ಸಂಸ್ಥೆಯು ಈಗಾಗಲೇ 199 ರೂಪಾಯಿ ಮತ್ತು 249 ರೂಪಾಯಿ ಪ್ಲಾನ್ ರದ್ದುಗೊಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net