More

    ಮೊದಲ ದಿನವೇ ಆಡಳಿತಕ್ಕೆ ಹೊಸ ದಿಕ್ಸೂಚಿ, ಆರ್ಥಿಕ ಶಿಸ್ತಿಗೆ ಮಾರ್ಗಸೂಚಿ ಕೊಟ್ಟ ಬೊಮ್ಮಾಯಿ

    ಬೆಂಗಳೂರು: ಸಿಎಂ ಆಗಿ ಪದಗ್ರಹಣ ಮಾಡಿದ ಬಳಿಕ ವಿಧಾನಸೌಧದ ಬಾಗಿಲಿಗೆ ನಮಸ್ಕರಿಸಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಂದಿನ ಯೋಜನೆ, ಗುರಿ, ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಕರೊನಾ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಚೊಚ್ಚಲ ಸುದ್ದಿಗೋಷ್ಠಿಯಲ್ಲಿ ಮಹತ್ವದ ಮಾಹಿತಿ ನೀಡಿದರು. ಅಲ್ಲದೆ, ಸಿಎಂ ಆದ ಮೊದಲ ದಿನವೇ 4 ಮಹತ್ವದ ನಿರ್ಣಯವನ್ನೂ ಘೋಷಿಸಿದರು.

    ಪಕ್ಷದ ಅಧ್ಯಕ್ಷರಾದ ನಡ್ಡಾಜಿ ಅವರ ಮಾರ್ಗದರ್ಶನದಲ್ಲಿ ನಮ್ಮ ನಾಯಕರಾದ ಯಡಿಯೂರಪ್ಪ ಅವರ ಸಲಹೆಯಂತೆ ನನ್ನನ್ನು ಶಾಶಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು. ಇಂದು ನಾನು ಸಿಎಂ ಆಗಿ ಪದಗ್ರಹಣ ಮಾಡಿದೆ. ಪೂರ್ವ ಪ್ರಮಾಣದ ಸಂಪುಟ ಮಾಡಿಲ್ಲ. ಆದಾಗ್ಯೂ ಆಡಳಿತದಲ್ಲಿ ವ್ಯತ್ಯಾಸ ಆಗಬಾರದು‌ ಎಂದು ಸಂಪುಟ ಸಭೆ, ಅಧಿಕಾರಿಗಳ ಸಭೆ ಮಾಡಿದ್ದೇನೆ. ನಮ್ಮ ಸರ್ಕಾರದ ದಿಕ್ಸೂಚಿ ಏನು ಎಂಬುದನ್ನು ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ. ದಕ್ಷ- ಪ್ರಾಮಾಣಿಕ-ಜನಪರ ಆಡಳಿತ ನನ್ನ ಗುರಿ. ಕಟ್ಟಕಡೆಯ ಜನರ ಪರ ನಮ್ಮ ಸರ್ಕಾರದ ರಿಜಲ್ಟ್ ನಿಂದ ಗೊತ್ತಾಗಬೇಕು. ಆದೇಶದಿಂದ ಅಲ್ಲ, ಆವೇಶದ ಅನುಷ್ಠಾನದಿಂದ ಆಗಬೇಕಿದೆ. ಅಂತರ್ ಇಲಾಖೆ ಕೋ ಆರ್ಡಿನೇಷನ್ ಇರಬೇಕು‌. ಕಾಲಮಿತಿಯಲ್ಲಿ ಕಾರ್ಯಕ್ರಮ ಅನುಷ್ಠಾನ ಆಗಬೇಕು. ವಿಳಂಬ ಆಗಬಾರದು ಟೀಮ್ ವಕ್೯ ಆಗಬೇಕು‌. ಅಧಿಕಾರಿಗಳು ಏನೇ ಮಾಡಿದರೂ ನಡೆಯುತ್ತದೆ ಎಂಬುದನ್ನು ಸಹಿಸುವುದಿಲ್ಲ ಎಂದರು.

    ಇಲಾಖೆಗಳ ನಡುವಿನ ಹೊಂದಾಣಿಕೆ ಮುಖ್ಯ. ಕಾಲ ಮಿತಿಯೊಳಗೆ ಕೆಲಸಗಳು ಆಗಬೇಕು ಎಂದು ಸೂಚನೆ ನೀಡಿದ್ದೀನಿ. ಹಣಕಾಸಿನ ಶಿಸ್ತನ್ನು ತರುವುದು ಬಹಳ ಅವಶ್ಯಕತೆ ಇದೆ. ಮಾ.31ರರೊಳಗೆ ಎಲ್ಲ ಇಲಾಖೆಯಲ್ಲೂ ಅನಗತ್ಯ ಖರ್ಚುವೆಚ್ಚವನ್ನ ಕಡಿಮೆ ಮಾಡಬೇಕು. ಕನಿಷ್ಠ ಶೇ.5 ಆದರೂ ಇಳಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಯಾವುದೇ ಕೆಲಸಗಳು ವಿಳಂಬ ಆಗಬಾರದು. ಫೈಲ್​ ಕ್ಲಿಯರೆನ್ಸ್​ ಬೇಗವೇ ಆಗಬೇಕು, ಮುಂಬರುವ ದಿನ ಫೈಲ್ ಮೂಮೆಂಟ್​ಗೆ ಹೊಸ ಯೋಚನೆ ಮಾಡಲಾಗುವುದು. ಫೈಲ್ ಕ್ಲಿಯರೆನ್ಸ್ ಅಭಿಯಾನ ಮಾಡುತ್ತೇವೆ. ಅಪ್ ಟು ಡೇಟ್ ಇರಬೇಕು ಎಂಬುದು ನನ್ನ ಯೋಚನೆ. ಇದರಿಂದ ಆಡಳಿತದಲ್ಲಿ ಚುರುಕು ತರಲಾಗುವುದು. ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸಲು ಆದ್ಯತೆ ಕೊಡುತ್ತೇವೆ ಎಂದು ತಮ್ಮ ಮುಂದಿನ ಆಡಳಿತ ವೈಖರಿ ಬಗ್ಗೆ ಬೊಮ್ಮಾಯಿ ಬಿಚ್ಚಿಟ್ಟರು.

    ಆರ್ಥಿಕ ಸ್ಥಿತಿ ಉತ್ತಮ ಮಾಡಬೇಕು. ಆ ಪ್ರಯತ್ನ‌ ಮಾಡುತ್ತೇವೆ. ಫ್ಲಡ್ ಮತ್ತು ಕೋವಿಡ್ ನಮ್ಮ ಆದ್ಯತೆ. ಕೋವಿಡ್ ನಿಯಂತ್ರಣದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದ ಬೊಮ್ಮಾಯಿ, ಮಹತ್ವದ 4 ನಿರ್ಣಯಗಳನ್ನು ಘೋಷಿಸಿದರು. ಸಿಎಂ ಆದ ಮೊದಲ ದಿನವೇ ರೈತ ಮಕ್ಕಳಿಗೆ ಬಂಫರ್​ ಗಿಫ್ಟ್​ ಕೊಟ್ಟರು.

    ಬೊಮ್ಮಾಯಿ ಮೊದಲ ಸಂಪುಟದ ನಿರ್ಣಯಗಳು ಇಲ್ಲಿವೆ
    1. ರೈತರ ಮಕ್ಕಳಿಗಾಗಿ ಹೆಚ್ಚನ ಉನಗ‌ತ ಶಿಕ್ಷಣ ಪ್ರೋತ್ಸಾಹ ಕೊಡುವುದು. ರೈತರ ಮಕ್ಕಳು ವಿದ್ಯೆ ವಂಚಿತರಾಗಬಾರದು. ರೈತರ ಮಕ್ಕಳಿಗೆ ಸ್ಕಾಲರ್ ಶಿಪ್‌ ಮಾಡುತ್ತೇವೆ. ಅದಕ್ಕೆ ಸಾವಿರ ಕೋಟಿ ರೂ. ಅನ್ನು ಮೀಸಲಡಿತ್ತೇವೆ.
    2. ಈಗಾಗಲೇ ಜಾರಿ ಇರುವ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಕೊಡುತ್ತಿರುವ 1000 ರೂ. ಅನ್ನು 1,200ಕ್ಕೆ ಹೆಚ್ಚಳ. 863.53 ಕೋಟಿ ಹೊರೆಯಾಗಲಿದ್ದು, 35.98 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ.
    3. ವಿಧವಾ ವೇತನ 600 ರೂ.ನಿಂದ 800ಕ್ಕೆ ಏರಿಕೆ, 17.25 ಲಕ್ಷ ಜನರಿಗೆ ಪ್ರಯೋಜನ.
    4. ಅಂಗವಿಕಲರಿಗೆ 600 ರೂ.ನಿಂದ 800 ರೂ.ಗೆ ಹೆಚ್ಚಳ. 3.66 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ 90 ಕೋಟಿ ರೂ. ಹೆಚ್ಚಿಗೆ ಹೊರೆ ಆಗಲಿದೆ.

    ಇಂದಿನಿಂದ ಬೊಮ್ಮಾಯಿ ‘ರಾಜ್ಯ’ಭಾರ! ಸಮಸ್ಯೆಗಳನ್ನೇ ಹೊದ್ದು ಮಲಗಿದೆ ಹಾದಿ…

    ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಕೊಕ್​? ಸಂಭಾವ್ಯ ಸಚಿವರ EXCLUSIVE ಪಟ್ಟಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts