ಇಂದಿನಿಂದ ಬೊಮ್ಮಾಯಿ 'ರಾಜ್ಯ'ಭಾರ! ಸಮಸ್ಯೆಗಳನ್ನೇ ಹೊದ್ದು ಮಲಗಿದೆ ಹಾದಿ...

bommai
Published on

ಬೆಂಗಳೂರು: ಇಂದಿನಿಂದ ಬಸವರಾ ಬೊಮ್ಮಾಯಿ ರಾಜ್ಯಭಾರ ಶುರುವಾಗಲಿದೆ. ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಲ್ಲಿ ಅಧಿಕಾರ ಸ್ವೀಕರಿಸಿದ ಬೊಮ್ಮಾಯಿಗೆ ಅಧಿಕಾರಾವಧಿ ಇರೋದು ಇನ್ನು ಒಂದೂಮುಕ್ಕಾಲು ವರ್ಷ ಮಾತ್ರ. ಈ ಸಮಯದಲ್ಲೇ ರಾಜ್ಯದ ಜನತೆ ಮೆಚ್ಚುವಂತಹ ಉತ್ತಮ ಆಡಳಿತ ನೀಡುವ ಜತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲೂ ಕಾರ್ಯನಿರ್ವಹಿಸಬೇಕಿದೆ.

ಸಚಿವಸ್ಥಾನ ಆಕಾಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದ್ದು, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಿದೆ. ಸದ್ಯ ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಲುಕಿದ್ದು, ರಾಜ್ಯದ ಜನತೆ ಕರೊನಾ ಸಂಕಷ್ಟದಿಂದ ಹೊರಬಂದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನ ನಿಭಾಯಿಸಿ ರಾಜ್ಯಭಾರ ಮಾಡಬೇಕಿದೆ. ಕರೊನಾ ಹಿನ್ನೆಲೆ ಅಭಿವೃದ್ಧಿ ಕಾರ್ಯಕ್ಕೆ ಭಾರೀ ಹಿನ್ನೆಡೆಯಾಗಿದ್ದು, ನಿರುದ್ಯೋಗ ಸಮಸ್ಯೆಯೂ ದಟ್ಟವಾಗಿ ಆವರಿಸಿದೆ. ಅಭಿವೃದ್ಧಿಯತ್ತಲೂ ಗಮನಹರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net