ವಿಮಾನ ತುರ್ತು ಲ್ಯಾಂಡಿಂಗ್​; ಏರ್ ಇಂಡಿಯಾ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು!

Air India flight
Published on

ನವದೆಹಲಿ: ಪುಣೆಯಿಂದ ದೆಹಲಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಲ್ಯಾಂಡಿಂಗ್​ ಮಾಡಲಾಡಗಿದೆ.

ಮಂಗಳವಾರ ಸಂಜೆ 5.44ಕ್ಕೆ ವಿಮಾನ ಪುಣೆಯಿಂದ ಆಗಮಿಸಿತ್ತು. ಅದರಲ್ಲಿ 180 ಪ್ರಯಾಣಿಕರಿದ್ದರು. 'ಪುಣೆ-ದೆಹಲಿ ನಡುವೆ ಕಾರ್ಯಾಚರಿಸುಸುತ್ತಿರುವ ಏರ್ ಇಂಡಿಯಾ ವಿಮಾನ AI-858ರ ವಿಂಡ್‌ಶೀಲ್ಡ್‌ನ ಬಲಭಾಗದಲ್ಲಿ (ಸ್ಟಾರ್‌ಬೋರ್ಡ್ ಬದಿಯಲ್ಲಿ) ಸಣ್ಣ ಬಿರುಕು ಕಾಣಿಸಿಕೊಂಡ ನಂತರ, ನಿಗದಿತ ಆಗಮನದ ಸಮಯಕ್ಕಿಂತ ಮುಂಚಿತವಾಗಿ ಸುರಕ್ಷಿತವಾಗಿ ದೆಹಲಿಗೆ ಬಂದಿಳಿಯಿತು'ಎಂದು ಏರ್‌ಲೈನ್ಸ್ ತಿಳಿಸಿದೆ.

ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನದ ವಿಂಡ್‌ಶೀಲ್ಡ್ ಅನ್ನು ಬದಲಾಯಿಸಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net