ನಾಗ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ; ಟೇಕ್​ ಆಫ್​ ಆದ ಕೆಲವೇ ಕ್ಷಣಗಳಲ್ಲಿ ವಾಪಸ್| Air India Flight

ವಿಜಯವಾಣಿ (91)
Published on

ನಾಗ್ಪುರ: ನಾಗ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ(Air India Flight) ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ, ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ನಾಗ್ಪುರ ಏರ್​ಪೋರ್ಟ್​​ಗೆ ವಿಮಾನ ವಾಪಸ್ ಬಂದಿದ್ದು, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಶನಿವಾರ(ಅ. 25) ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, "ಅಕ್ಟೋಬರ್ 24 ರಂದು ನಾಗ್ಪುರದಿಂದ ದೆಹಲಿಗೆ ಹಾರುತ್ತಿದ್ದ AI466 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹಕ್ಕಿ ಡಿಕ್ಕಿ ಹೊಡೆದಿದೆ. ವಿಮಾನದ ಪರಿಶೀಲನೆಗಾಗಿ, ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನದ ಪ್ರಕಾರ, ಮುನ್ನೆಚ್ಚರಿಕೆ ಕ್ರಮವಾಗಿ ನಾಗ್ಪುರಕ್ಕೆ ಹಿಂತಿರುಗಲು ಸಿಬ್ಬಂದಿ ನಿರ್ಧರಿಸಿದರು. ವಿಮಾನವು ನಾಗ್ಪುರದಲ್ಲಿ ಸುರಕ್ಷಿತವಾಗಿ ಇಳಿಯಿತು. ನಿರ್ವಹಣಾ ತಪಾಸಣೆಗೆ ಒಳಗಾಗಿದ್ದರಿಂದ ವಿಮಾನ ರದ್ದಾಯಿತು. ನಾಗ್ಪುರದಲ್ಲಿರುವ ನಮ್ಮ ತಂಡವು ಪ್ರಯಾಣಿಕರಿಗೆ ಊಟ ಬಡಿಸುವುದು ಸೇರಿದಂತೆ ತಕ್ಷಣದ ಸಹಾಯವನ್ನು ಒದಗಿಸಿತು ಎಂದು ಹೇಳಿದೆ.

ಇದೇ ವೇಳೆ ಅಕ್ಟೋಬರ್ 26ರಿಂದ ಜಾರಿಗೆ ಬರುವ ಏರ್ ಇಂಡಿಯಾ T3 ವಿಸ್ತರಣಾ ಚಟುವಟಿಕೆ ಭಾಗವಾಗಿ ಏರ್ ಇಂಡಿಯಾ ತನ್ನ 180 ದೈನಂದಿನ ದೇಶೀಯ ವಿಮಾನಗಳಲ್ಲಿ 60 ವಿಮಾನಗಳು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ಟರ್ಮಿನಲ್ 2 ಗೆ ಸ್ಥಳಾಂತರಗೊಳ್ಳಲಿವೆ ಎಂದು ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net