ಬೆಂಗಳೂರಿನಲ್ಲಿ 24ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಏರ್​ಫೋರ್ಸ್​ ಇಂಜಿನಿಯರ್​! | Suicide

Untitled design - 2025-09-15T125615.359
Published on

Suicide: ಭಾರತೀಯ ವಾಯುಪಡೆಯ ಎಂಜಿನಿಯರ್ ಒಬ್ಬರು ಭಾನುವಾರ(ಸೆ.14) ಸಂಜೆ 24ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಲಸೂರು ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ 25 ವರ್ಷದ ಲೋಕೇಶ್ ಪವನ್ ಕೃಷ್ಣ ಎಂದು ಮೃತನನ್ನು ಗುರುತಿಸಲಾಗಿದೆ.

ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನ 24 ನೇ ಮಹಡಿಯಿಂದ ಭಾರತೀಯ ವಾಯುಪಡೆಯ ಎಂಜಿನಿಯರ್ ಲೋಕೇಶ್ ಜಿಗಿದಿದ್ದಾರೆ. ನಿನ್ನೆ ಸಂಜೆ ಲೋಕೇಶ್ ತಮ್ಮ ಸಹೋದರಿ ಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದರು, ಅಲ್ಲಿ ಯಾವುದೋ ವಿಷಯದಿಂದ ಅವರ ಮನಸ್ಥಿತಿ ಹಾಳಾಗಿತ್ತು ಆ ಕ್ಷಣದಲ್ಲಿ ಅವರು ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದ ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net