ವಾಯುಪಡೆಯ 'ಅಪಾಚೆ' ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ! ಕಾರಣ ತಿಳಿಸಿದ ಐಎಎಫ್

WhatsApp Image 2024-04-05 at 8.13.19 AM
Published on

ಲಡಾಖ್: ಭಾರತೀಯ ವಾಯುಪಡೆಗೆ (ಐಎಎಫ್) ಸೇರಿದ ಅಪಾಚೆ ಹೆಲಿಕಾಪ್ಟರ್ ಲಡಾಖ್‌ನಲ್ಲಿ ಕಾರ್ಯಾಚರಣೆಯ ವೇಳೆ ದಿಢೀರ್​ಭೂಸ್ಪರ್ಶ ಮಾಡಿದ್ದು, ಭೂಪ್ರದೇಶ ಮತ್ತು ಎತ್ತರದ ಆಲ್ಟಿಟ್ಯುಡ್​​ ಕಾರಣದಿಂದಾಗಿ ಹಾನಿಗೊಳಗಾಗಿದೆ ಎಂದು ಐಎಎಫ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಘಟನೆಯ ಕುರಿತು ನ್ಯಾಯಾಲಯದ ತನಿಖೆಗೆ ಆದೇಶಿಸಲಾಗಿದೆ. "ಐಎಎಫ್ ಅಪಾಚೆ ಹೆಲಿಕಾಪ್ಟರ್ 03 ಏಪ್ರಿಲ್ 24 ರಂದು ಲಡಾಖ್ ಎಒಆರ್‌ನಲ್ಲಿ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಮುನ್ನೆಚ್ಚರಿಕೆ ಲ್ಯಾಂಡಿಂಗ್ ನಡೆಸಿತು. ಈ ಲ್ಯಾಂಡಿಂಗ್ ಪ್ರಕ್ರಿಯೆಯ ವೇಳೆ ಇದು ಏರಿಳಿತದ ಭೂಪ್ರದೇಶ ಮತ್ತು ಎತ್ತರದ ಕಾರಣದಿಂದಾಗಿ ಹಾನಿಗೆ ಒಳಪಟ್ಟಿದೆ" ಎಂದು ಐಎಎಫ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

"ಹೆಲಿಕಾಪ್ಟರ್​ನಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದು, ಹತ್ತಿರದ ವಾಯುನೆಲೆಗೆ ಬಂದಿಳಿದ್ದಾರೆ. ಸೂಕ್ತ ಕಾರಣವನ್ನು ತನಿಖೆ ಮಾಡಲು ನ್ಯಾಯಾಲಯದ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಇಂಡಿಯನ್​​ ಏರ್​ ಫೋರ್ಸ್​ ಮಾಹಿತಿ ಹಂಚಿಕೊಂಡಿದೆ. ಐಎಎಫ್ ತನ್ನ ರೋಟರಿ ವಿಭಾಗಕ್ಕೆ ಬಲ ನೀಡಲು 22 ಯುಎಸ್ ನಿರ್ಮಿತ ದಾಳಿ ಮಾಡುವ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಿದೆ.

ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಕೆಲವು ತಾಂತ್ರಿಕ ದೋಷವನ್ನು ಶಂಕಿಸಿ ಪಂಜಾಬ್‌ನ ಸಂಗ್ರೂರ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಈ ಘಟನೆಯ ನಂತರ ಲಡಾಖ್​ನಲ್ಲಿ ಅಪಾಚೆ ಹೆಲಿಕಾಪ್ಟರ್​ ಸಹ ತುರ್ತು ಭೂಸ್ಪರ್ಶಕ್ಕೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net