

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿರುವ ಶೇಖ್ ಫಾಝಿಲ್, ಕ್ಯಾಸಿನೋ ಪಾರ್ಟಿಗೆ ಸೆಲೆಬ್ರಿಟಿಗಳ ಕೈಲಿ ಇತರರನ್ನು ಇನ್ವೈಟ್ ಮಾಡಿಸುತ್ತಿದ್ದ. ಈ ಪಾರ್ಟಿಗೆ ಬರುವಂತೆ ಸ್ಯಾಂಡಲ್ವುಡ್ ನಟಿ ಐಂದ್ರಿತಾ ರೇ ಕೂಡ ಪ್ರಮೋಟ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿರಿ ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್ ಮುಖಂಡ ಸಿಸಿಬಿ ವಶಕ್ಕೆ
'ಫಾಝಿಲ್ನ ಕ್ಯಾಸಿನೋ ಪಾರ್ಟಿಗೆ ಆಹ್ವಾನಿಸಿದ್ದ ವಿಡಿಯೋ ಕುರಿತು ಮಾತನಾಡಿದ ಐಂದ್ರಿತಾ ರೇ, 'ಅದು ಮೂರು ವರ್ಷಗಳ ಹಿಂದಿನ ವಿಡಿಯೋ. ಸಿನಿಮಾ ಪ್ರಮೋಷನ್ಗಾಗಿ ಶ್ರೀಲಂಕಾಗೆ ಹೋಗಿದ್ದೆ. ಸುಮಾರು-ನಟ-ನಟಿಯರು ಹೋಗಿದ್ದಾರೆ. ಸೆಲೆಬ್ರಿಟಿ ಆಗಿರೋದರಿಂದ ಪಾರ್ಟಿ ಬಗ್ಗೆ ಮಾತನಾಡಿಸಿದ್ದರು. ಆಗ ಫಾಝಿಲ್ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನನಗೂ ಅವರಿಗೂ ಸಂಬಂಧವಿಲ್ಲ. ಡ್ರಗ್ಸ್ ದಂಧೆ ಬಗ್ಗೆ ನನಗೇನೂ ಗೊತ್ತಿಲ್ಲ' ಎಂದರು.