VIDEO | ಆ್ಯಂಬುಲೆನ್ಸ್ ಇಲ್ಲವೆಂದು ತಳ್ಳುಗಾಡಿಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದ ವ್ಯಕ್ತಿ!

Ailing patient transported on cart due to lack of ambulance
Published on

ಉತ್ತರ ಪ್ರದೇಶ: ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಮೂಲಕ ಸೌಕರ್ಯದ ಕೊರೆತೆಯಿದೆ. ಕೆಲವು ಕಡೆ ಸಾರ್ವಜನಿಕ ಸೌಲಭ್ಯಗಳು ಸಮರ್ಪಕವಾಗಿದ್ದರೂ, ಜನರ ಬೇಜವಾಬ್ದಾರಿಯಿಂದಾಗಿ ಬಳಕೆಗೆ ಯೋಗ್ಯವಾಗಿರುವುದಿಲ್ಲ. ಇನ್ನು ತುರ್ತು ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾಗಿರುವುದು ಆ್ಯಂಬುಲೆನ್ಸ್​ ಸೌಲಭ್ಯಗಳು. ಇಂದಿಗೂ ಕೂಡ ಗ್ರಾಮೀಣ ಭಾಗದ ಜನರ ತುರ್ತು ಅಗತ್ಯಕ್ಕೆ ಆ್ಯಂಬುಲೆನ್ಸ್​​​ಗಳ ಕೊರತೆಯಿದೆ. ಹೀಗಾಗಿ ಅಗತ್ಯದ ಸಂದರ್ಭಗಳಲ್ಲಿ ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದಂತಹ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಇಂತದ್ದೇ ಪ್ರಕರಣವೊಂದು ನಡೆದಿದೆ.

ಉತ್ತರ ಪ್ರದೇಶದ ಖುಶಿನಗರ ಎಂಬ ಜಿಲ್ಲೆಯಲ್ಲಿ ಸಮರ್ಪಕವಾದ ಆ್ಯಂಬುಲೆನ್ಸ್ ಸೌಲಭ್ಯ ಇಲ್ಲದಾಗಿದೆ. ಇದರಿಂದಾಗಿ ವ್ಯಕ್ತಿಯೊಬ್ಬ ಮುದಿ ವಯಸ್ಸಿನ ಅನಾರೋಗ್ಯ ಪೀಡಿತೆಯನ್ನು ತಳ್ಳುಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಕಟ್ಟಡ ಕಾರ್ಮಿಕರು ಬಳಸುವಂತಹ ತಳ್ಳುಗಾಡಿ ಇದಾಗಿದೆ. ನಂತರ ಆಸ್ಪತ್ರೆಯ ಹೊರಾಂಗಣದಲ್ಲಿ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು ತಳ್ಳುಗಾಡಿಯಲ್ಲಿ ಮಲಗಿಕೊಂಡು ನರಳಾಡುತ್ತಿರುವುದನ್ನು ಗಮನಿಸಿಬಹುದು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಸರ್ಕಾರದ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ. ಉತ್ತರ ಪ್ರದೇಶದಂತಹ ಅತೀ ದೊಡ್ಡ ರಾಜ್ಯದಲ್ಲಿ ಜನರ ಉಪಯೋಗಕ್ಕೆ ಸಮರ್ಪಕವಾದಂತಹ ಸೌಲಭ್ಯಗಳು ಸಿಗಬೇಕು. ಆಗ ಮಾತ್ರ ಬದಲಾಗುತ್ತಿರುವ ಹಾಗೂ ಅಭಿವೃದ್ಧಿ ಹೊಂದಿದ ರಾಜ್ಯ ಎನ್ನಬಹುದು. ಅದರಲ್ಲೂ ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್​ ಸೇವೆ ಸರಿಯಾಗಿ ಸಿಗುತ್ತಿಲ್ಲ ಎಂದಾದರೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net