ಮೆದು ಲಕ್ಷಣ ಹಾಗೂ ಲಕ್ಷಣರಹಿತ ಕೋವಿಡ್​ ರೋಗಿಗಳಲ್ಲಿ ವೈರಸ್ ಯಾವಾಗ ಸಾಯುತ್ತದೆ? ಇಲ್ಲಿದೆ ಮಾಹಿತಿ...

Corona 44
Published on

ನವದೆಹಲಿ: ಕೋವಿಡ್19 ವೈರಸ್ ಪಾಸಿಟಿವ್ ಬಂದು, ಮೆದು ಲಕ್ಷಣ ಹಾಗೂ ಲಕ್ಷಣರಹಿತ ಇರುವ ರೋಗಿಗಳಲ್ಲಿ ಕರೊನಾ ವೈರಸ್ 7 ರಿಂದ 8 ದಿನಗಳಲ್ಲಿ ಸಾಯುತ್ತದೆ ಎಂದು ದೆಹಲಿ ಏಮ್ಸ್​ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಶುಕ್ರವಾರ ಹೇಳಿದ್ದಾರೆ.

ಈ ವೇಳೆಯಲ್ಲಿ ವೈರಸ್ ಬೇರೆಯವರಿಗೆ ಹರಡುವುದು ತುಂಬಾ ವಿರಳ. ಆದರೆ, ಮೃತ ಕರೊನಾ ಕಣಗಳು ಆರ್​ಟಿ ಪಿಸಿಆರ್​ ಟೆಸ್ಟ್​​ನಲ್ಲಿ ಪಾಸಿಟಿವ್ ಬರಬಹುದು ಎಂದು ಗುಲೇರಿಯಾ ಹೇಳಿದ್ದಾರೆ. ಕೋವಿಡ್ ಕಾಣಿಸಿಕೊಂಡು ಮೆದು ಹಾಗೂ ಲಕ್ಷಣರಹಿತ ರೋಗಿಗಳು ಹೋಮ್​ ಐಸೋಲೇಷನ್​ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಆದರೆ, ಕೇಂದ್ರ ಸರ್ಕಾರ ಮತ್ತೆ ಶುಕ್ರವಾರ ಹೋಮ್​ ಐಸೋಲೇಷನ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್ ಕಾಣಿಸಿಕೊಂಡ ನಂತರ ಈ ಮೊದಲು ಹತ್ತು ದಿನ ಐಸೋಲೇಷನ್ ಇರಬೇಕು ಎಂದು ಮೊದಲು ಹೇಳಿತ್ತು. ಇದೀಗ ಮತ್ತೆ ರೋಗಿ ಹತ್ತು ದಿನ ಐಸೋಲೇಷನ್​ನಲ್ಲಿ ಇರಬೇಕು ಎಂದು ಹೇಳಿದೆ.

ಭಾರತದಲ್ಲಿ ಶುಕ್ರವಾರ 3.87 ಲಕ್ಷ ಕರೊನಾ ಪ್ರಕರಣಗಳು ವರದಿಯಾಗಿದ್ದು, 3498 ಜನ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net