

ಚಿಕ್ಕೋಡಿ: ಏಡ್ಸ್ ರೋಗದ ಕುರಿತು ಜಾಗೃತಿ ಅಗತ್ಯ ಎಂದು ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕದ ಮೇಲ್ವಿಚಾರಕ ಎಂ.ಎಂ.ಸನದಿ ಹೇಳಿದರು.
ತಾಲೂಕಿನ ಕೇರೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಡ್ಸ್ ಜಾಗತಿ ಹಾಗೂ ಆಪ್ತ ಸಮಾಲೋಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಂ.ಆರ್.ಭಾಗಾಯಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶಂಕರ ತೇಲಿ, ಎಸ್.ಎಂ.ಕುಲಕರ್ಣಿ, ಅನಿಲ ಬಾನೆ, ಎಸ್.ಡಿ.ಮಾನೆ, ಗಣಪತಿ ಪಾಟೀಲ, ಕವಿತಾ ಮಾಲಬನ್ನವರ, ಪ್ರತಿಭಾ ವಟ್ನಾಳ, ಆರ್.ಎ.ಪಾಟೀಲ ಇತರರಿದ್ದರು. ಗಾಯತ್ರಿ ಪರಗೌಡ ಕಾರ್ಯಕ್ರಮ ನಿರ್ವಹಿಸಿದರು.