

ಕೋಲಾರ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಾಜ್ಯದ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಒಂದು ಕ್ಷೇತ್ರದ ಅಭ್ಯರ್ಥಿ ಕಗ್ಗಂಟಾಗಿ ಉಳಿದಿತ್ತು. ಕೊನೆಗೂ ಕೋಲಾರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್ ರಿವೀಲ್ ಮಾಡಿದೆ.
ಅಭ್ಯರ್ಥಿಗಳ 9ನೇ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಕರ್ನಾಟಕ ಮೂರು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಘೋಷಣೆ ಮಾಡಲಾಗಿತ್ತು. ಇದರೊಂದಿಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು,ಕೋಲಾರದಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಪ್ರಶ್ನೆಗೆ ಇಂದು ಕಾಂಗ್ರೆಸ್ ಉತ್ತರ ನೀಡಿದೆ. ಕೋಲಾರ ಕ್ಷೇತ್ರಕ್ಕೆ ಕೆ, ವಿ ಗೌತಮ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಡುವೆ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆದಿತ್ತು. ಇದರ ಮಧ್ಯೆ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕೋಲಾರ ಟಿಕೆಟ್ ಅಂತಿಮವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಮೇಶ್ ಕುಮಾರ್ ಬಣದ ಶಾಸಕರು ರಾಜೀನಾಮೆಗೆ ಮುಂದಾಗಿದ್ದರು. ಇದು ರಾಜ್ಯ ರಾಜಕಾರನದಲ್ಲಿ ಬಾರೀ ಸಂಚಲನಕ್ಕೆ ಕಾರಣವಾಗಿತ್ತು.ಕೊನೆಗೆ ಸಿದ್ದರಾಂಯ್ಯ, ಡಿಕೆ ಶಿವಕುಮಾರ್ ಸೇರಿಕೊಂಡು ಕೋಲಾರ ಕಾಂಗ್ರೆಸ್ ಶಾಸಕ ಸಂಧಾನ ಸಭೆ ನಡೆಸಿದ್ದು, ರಾಜೀನಾಮೆಗೆ ಮುಂದಾದ ನಾಯಕರುಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದು, ಯಾರಿಗೆ ನೀಡಬೇಕು ಎನ್ನುವುದನ್ನು ಚಿಂತನೆ ನಡೆಸಿದ್ದರು.
ಒಂದು ವೇಳೆ ಮುನಿಯಪ್ಪ ಅಳಿಯನಿಗೆ ನೀಡಿದರೆ ರಮೇಶ್ ಕುಮಾರ್ ಬಣ ಚುನಾವಣೆಯಲ್ಲಿ ಕೆಲಸ ಮಾಡಲ್ಲ. ಇನ್ನು ರಮೇಶ್ ಕುಮಾರ್ ಬಣಕ್ಕೆ ನೀಡದರೆ ಮುನಿಯಪ್ಪ ಬಣ ಮುನಿಸಿಕೊಳ್ಳಲಿದೆ. ಹೀಗಾಗಿ ಇಬ್ಬರ ನಡುವೆ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡದರೆ ಹೇಗೆ ಎನ್ನುವ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ತೀವ್ರ ಕುತೂಹಲ ಮೂಡಿಸಿತ್ತು. ಎಲ್ಲಾ ಗೊಂದಲಗಳ ನಡುವೆ ಕೋಲಾರ ಕ್ಷೇತ್ರಕ್ಕೆ ಕೆ, ವಿ ಗೌತಮ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಎರಡೂ ಬಳಗಳನ್ನು ಬಿಟ್ಟು ಕಾಂಗ್ರೆಸ್ ನಾಯಕರು ಕೆ, ವಿ ಗೌತಮ್ ಅವರನ್ನು ಕಾಂಗ್ರೆಸ್ ಚುನಾವಣಾ ಅಖಾಡಕ್ಕೆ ಇಳಿಸಿದೆ. ಮಾಜಿ ಕಾರ್ಪೋರೆಟರ್ ವಿಜಯ್ ಕುಮಾರ್ ಪುತ್ರ ಕೆ, ವಿ ಗೌತಮ್ ಆಗಿದ್ದಾರೆ.
ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ – ಸಂಯುಕ್ತಾ ಪಾಟೀಲ್
ಧಾರವಾಡ – ವಿನೋದ್ ಅಸೂಟಿ
ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
ಕೊಪ್ಪಳ – ರಾಜಶೇಖರ ಹಿಟ್ನಾಳ್
ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
ಬೀದರ್ – ಸಾಗರ್ ಖಂಡ್ರೆ
ದಕ್ಷಿಣ ಕನ್ನಡ – ಪದ್ಮರಾಜ್
ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್ ಹೆಗ್ಡೆ
ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
ಬೆಂಗಳೂರು ಸೆಂಟ್ರಲ್ -ಮನ್ಸೂರ್ ಅಲಿಖಾನ್
ಬೆಂಗಳೂರು ಉತ್ತರ -ಪ್ರೊ.ರಾಜೀವ್ ಗೌಡ
ಮೈಸೂರು -ಎಂ.ಲಕ್ಷ್ಮಣ್
ರಾಯಚೂರು -ಜಿ.ಕುಮಾರ ನಾಯಕ್
ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್
ಶಿವಮೊಗ್ಗ-ಗೀತಾ ಶಿವರಾಜ್ ಕುಮಾರ್
ತುಮಕೂರು-ಎಸ್ಪಿ ಮುದ್ದಹನುಮೇಗೌಡ
ಮಂಡ್ಯ-ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)
ಹಾಸನ- ಶ್ರೇಯಸ್ ಪಟೇಲ್
ಬೆಂಗಳೂರು ಗ್ರಾಮಾಂತರ-ಡಿಕೆ ಸುರೇಶ್
ವಿಜಯಪುರ- ರಾಜು ಅಲಗೂರು
ಹಾವೇರಿ- ಆನಂದ ಸ್ವಾಮಿ ಗಡ್ಡದೇವರ ಮಠ
ಚಿಕ್ಕಬಳ್ಳಾಪುರ -ರಕ್ಷಾ ರಾಮಯ್ಯ
ಚಾಮರಾಜನಗರ - ಸುನೀಲ್ ಬೋಸ್
ಬಳ್ಳಾರಿ - ಇ. ತುಕರಾಂ
ಕೋಲಾರ- ಕೆ, ವಿ ಗೌತಮ್