

ಬೆಂಗಳೂರು: ದೇಶ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಆರ್ಥಿಕ ತಜ್ಞ, ಸುಧಾರಕ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ಆಘಾತ ಉಂಟು ಮಾಡಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಹಣಕಾಸು ಸಚಿವರಾಗಿ ಹಾಗೂ ಹಾಗೂ 10 ವರ್ಷಗಳ ಕಾಲ ಪ್ರಧಾನಿಯಾಗಿ ಅವರು ಜಾರಿಗೆ ತಂದ ಉದಾರಿಕರಣ ಸೇರಿದಂತೆ ಹಲವು ಆರ್ಥಿಕ ಸುಧಾರಣಾ ಕ್ರಮಗಳು ಇಂದಿಗೂ ದೇಶದ ಹಣಕಾಸಿನ ಸದೃಡತೆಗೆ ನೆರವಾಗಿವೆ.ಜೊತೆಗೆ ಜಾಗತಿಕ ಮನ್ನಣೆಗೆ ಪಾತ್ರವಾಗಿವೆ. ಭಾರತದ ಆರ್ಥಿಕ ಇತಿಹಾಸದಲ್ಲಿ ಡಾ ಮನಮೋಹನ್ ಸಿಂಗ್ ಅವರ ಹೆಸರು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿzದೆ. ವಿದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅಲ್ಲಿನ ಬ್ಯಾಂಕ್‍ಗಳು ಮುಚ್ಚುತ್ತಿದ್ದಾಗ ನಮ್ಮ ದೇಶದ ಬ್ಯಾಂಕುಗಳು ಸಶಕ್ತವಾಗುತ್ತಾ ಸಾಗಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು ಸ್ಮರಣೀಯ ಎಂದಿದ್ದಾರೆ.