ಫಸಲ್ ಬಿಮಾ: ನೋಂದಣಿಗೆ ಒಂದು ದಿನ ಗಡುವು ವಿಸ್ತರಣೆ

farmers
Published on

ಬೆಂಗಳೂರು: ಕರ್ನಾಟಕ  ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ನಿಗದಿಪಡಿಸಿದ ಬೆಳೆ ವಿಮೆ ನೋಂದಣಿ ಅವಧಿಯನ್ನು ಮಂಗಳವಾರದವರೆಗೆ ಮುಂದೂಡಿಲಾಗಿದೆ. ಜು.31 ರವರೆಗೆ ಇದ್ದ ದಿನಾಂಕವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ 2023-24 ರ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಹೆಸರು, ತೊಗರಿ, ಉದ್ದು, ಸಜ್ಜೆ, ಜೋಳ, ಮುಸಕಿನ ಜೋಳ, ಸೋಯಾ ಅವರೆ, ಎಳ್ಳು, ಶೇಂಗಾ, ಹತ್ತಿ, ಟೊಮೊಟೊ, ಅರಿಶಿಣ ಈ ಎಲ್ಲ ಬೆಳೆಗಳಿಗೆ ಜು.31 ಕೊನೆಯ ದಿನವಾಗಿತ್ತು. ಆದರೆ ಬೆಳೆ ವಿಮೆ ನೋಂದಣಿಗಾಗಿ ಕೊನೆಯ
ಆ.1ರವರೆಗೆ ಸರ್ಕಾರದಿಂದ ಮರು ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net