ತಾಲೂಕಿನಲ್ಲಿ ರೈತರಿಗೆ ಬೀಜ, ಗೊಬ್ಬರ, ದಾಸ್ತಾನಿದೆ; ಮಂಜುನಾಥ ಅಂತರವಳ್ಳಿ

je721538035802367-abc
Published on

ರಾಣೆಬೆನ್ನೂರ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಗತ್ಯವಿರುವಷ್ಟು ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ವಾರ ಉತ್ತಮ ಮಳೆಯಾದ ಕಾರಣ ರೈತರು ಬಿತ್ತನೆ ಶುರು ಮಾಡಿಕೊಂಡಿದ್ದಾರೆ. ಆದರೆ, ಜೂನ್ 1ರಿಂದ ಮಳೆಗಾಲ ಪ್ರಾರಂಭವಾಗುತ್ತದೆ. ಆಗ ಬಿತ್ತನೆ ಶುರು ಮಾಡಿದರೆ ಸೂಕ್ತ ಎಂದರು.
ಎನ್.ಪಿ.ಕೆ. ಗೊಬ್ಬರಕ್ಕೆ ಪರ್ಯಾಯವಾಗಿ ಬೇರೆ ಗೊಬ್ಬರ ಹಾಗೂ ರೈತರ ಬೇಡಿಕೆಯ ಗೊಬ್ಬರ ಮೇ 28ರಂದು ರಾಣೆಬೆನ್ನೂರಿಗೆ ಬರಲಿದೆ. ನಗರ ಹಾಗೂ ಗ್ರಾಮೀಣ ಭಾಗ ಸೇರಿ ತಾಲೂಕಿನ 7 ಕೇಂದ್ರದಲ್ಲಿ ಬೀಜ ಗೊಬ್ಬರ ಪೂರೈಕೆಯಾಗುತ್ತಿದೆ. ಬೀಜ, ಗೊಬ್ಬರ ಮಾರಾಟ ಮಾಡುವ ಎಲ್ಲ ಅಂಗಡಿಕಾರರು ದರದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡಬಾರದು. ಅಂಗಡಿಯಲ್ಲಿ ದಾಸ್ತಾನು ಹಾಗೂ ದರ ಪಟ್ಟಿ ಪ್ರದರ್ಶನ ಮಾಡಬೇಕು. ರೈತರು ಖರೀದಿ ಮಾಡಿದ ಬೀಜಕ್ಕೆ ಕಡ್ಡಾಯವಾಗಿ ರಶೀದಿ ತೆಗೆದುಕೊಳ್ಳಬೇಕು ಎಂದರು.
ಉಪ ನಿರ್ದೇಶಕ ರೇವಣಸಿದ್ಧನಗೌಡ, ಸಹಾಯಕ ನಿರ್ದೇಶಕಿ ಶಾಂತಮಣಿ ಜಿ., ನಗರ ಕಾಂಗ್ರೆಸ್ ಅಧ್ಯಕ್ಷ ಶೇರುಖಾನ್ ಕಾಬೂಲಿ, ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ರವೀಂದ್ರಗೌಡ ಪಾಟೀಲ, ಇಕಾಲಸಾಬ್ ರಾಣೆಬೆನ್ನೂರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net