

ಬೆಂಗಳೂರು: ರಾಜ್ಯದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ಮತ್ತಷ್ಟು ಉದ್ಯೋಗ ಹೆಚ್ಚಿಸಲು, ಜನರಿಗೆ ಪೌಷ್ಟಿಕ ಆಹಾರ ಪೂರೈಸುವ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ತರಬೇತಿ ಮತ್ತು ಸಾಮಥ್ಯ ವೃದ್ದಿಸಲು ಕರ್ನಾಟಕ ಕೋಳಿ ಸಾಕಾಣಿಕೆದಾರರ ಸಂಘವು ಅಮೆರಿಕಾದೊಂದಿಗೆ ತಿಳುವಳಿಕ ಒಪ್ಪಟದ್ದಕ್ಕೆ ಸಹಿ ಮಾಡಿದೆ.
ಕರ್ನಾಟಕ ಕೋಳಿ ರೈತರ ಮತ್ತು ತಳಿಗಾರರ ಸಂಘದ ಅಧ್ಯಕ್ಷ ನವೀನ್ ಪಶುಪರ್ತಿ ಮಾತನಾಡಿ ಈ ಒಪ್ಪಂದದ ಪಾಲುದಾರಿಕೆಯಿಂದ ಕಕ್ಕುಟೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಯುಎಸ್‌ಎಸ್ ಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಮ್ ಸುಟರ್ ಮತ್ತು ಅಮೆರಿಕಾದ ಸೋಯಾ ಉತ್ಕೃಷ್ಟತಾ ಕೇಂದ್ರಗಳೊಂದಿಗೆ ಸಹಯೋಗ ಹೊಂದುವ ಉದ್ದೇಶ ನಮ್ಮದಾಗಿದ್ದು, ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ತಿಳಿಸಿದ್ದಾರೆ.
ಕೌಶಲ್ಯ ಭಾರತ ಯೋಜನೆಯಡಿ ಭಾರತದ ಕೋಳಿ ಉದ್ಯಮದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಕೋಳಿ ಮತ್ತು ಕೋಳಿ ತಳಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಕರ್ನಾಟಕ ಸರ್ಕಾರ ಮತ್ತು ಫೆಡರಲ್ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ ಎಂದರು.
ಎಪಿಎಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸಿಎ ಡಾ.ವಿಷ್ಣು ಭರತ್ ಆಲಂಪಲ್ಲಿ ಮತ್ತಿತರರಿದ್ದರು.