PHOTOS-VIDEO| ತಾಜ್​ ಮಹಲ್​ ಸೌಂದರ್ಯ ಕಣ್ತುಂಬಿಕೊಳ್ಳುತ್ತಲೇ ಕ್ಯಾಮರಾಗೆ ಪೋಸ್​​ ನೀಡಿದ ಟ್ರಂಪ್​ ದಂಪತಿ

Trump Couples
Published on

ನವದೆಹಲಿ: ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​

ಮುಮ್ತಾಜ್​ ಪ್ರೀತಿಯ ನೆನಪಿಗಾಗಿ ಶಹಜಹಾನ್​ ಕಟ್ಟಿಸಿದ ತಾಜ್​ ಮಹಲ್​ ಇತಿಹಾಸವನ್ನು ಹಾಗೂ ಅದರ ವಾಸ್ತು ಶಿಲ್ಪವನ್ನು ಗೈಡ್​ ಮೂಲಕ ಟ್ರಂಪ್​ ದಂಪತಿ ಪರಿಚಯಿಸಿಕೊಂಡರು. ವಿಶೇಷವೆಂದರೆ ಪ್ರತಿಯೊಂದು ಕ್ಷಣವನ್ನು ಟ್ರಂಪ್​ ದಂಪತಿ ಅನುಭವಿಸಿದರು. ಪ್ರೇಮ ಸೌಧದ ಮುಂದೆ ನಿಂತು ಕ್ಯಾಮರಾಗೆ ಪೋಸ್​ ನೀಡಿ ತಮ್ಮ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು.

ಇಷ್ಟೇ ಅಲ್ಲದೆ, ಟ್ರಂಪ್​ ದಂಪತಿ ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಕೂಡ ತಾಜ್​ ಮಹಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಇದರ ಜತೆಯಲ್ಲೇ ಆಗಮಿಸಿದ್ದ ಅಮೆರಿಕ ನಿಯೋಗವು ಕೂಡ ಪ್ರೇಮಸೌಧದ ಸೌಂದರ್ಯವನ್ನು ಸವಿಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net