

ಬೆಂಗಳೂರು: ಆಕಸ್ಮಿಕವಾಗಿ ಶೆಡ್‌ಗೆ ಬೆಂಕಿ ತಗುಲಿ ತಗುಲಿದ್ದು, ಅಗ್ನಿಯ ಕೆನ್ನಾಲಿಗೆಗೆ ಶೆಡ್ ಸಂಪೂರ್ಣ ಭಸ್ಮವಾಗಿ ನೆರೆಹೊರೆಯ ಎರಡು ಮನೆಗಳಿಗೆ ಹಾನಿಯಾಗಿದೆ.
ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ಸಮೀಪ ಕಳೆದ ನಾಲ್ಕೈದು ವರ್ಷಗಳಿಂದ ಖಾಲಿ ನಿವೇಶನದಲ್ಲಿ ಶೆಡ್ ನಿರ್ಮಿಸಿಕೊಂಡು ಪ್ಲಾಸ್ಟಿಕ್ ಹಾಗೂ ಮರ ಮುಟ್ಟುಗಳ ಮಾರಾಟ ನಡೆಸುತ್ತಿದ್ದರು. ಯಾವುದೇ ಅನುಮತಿ ಪಡೆಯದೆ ಅನಧೀಕೃತವಾಗಿ ನಡೆಸುತ್ತಿದ್ದ ಚಟುವಟಿಕೆಗೆ ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಗಿತಗೊಳಿಸಿದ್ದರು.
ಸೋಮವಾರ ಮುಂಜಾನೆ ಈ ಜಾಗದಲ್ಲಿ ಬೆಂಕಿಕಾಣಿಸಿಕೊಂಡಿದ್ದು ಏನಾಗುತ್ತಿದೆ ಎಂಬುದನ್ನು ಅಕ್ಕಪಕ್ಕದವರು ಅರಿಯುವ ಮುನ್ನವೇ ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶಕ್ಕೆ ಆವರಿಸಿ ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕೆಂಗೇರಿ ಪೋಲಿಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.