ಹನುಮಧ್ವಜ ಘಟನೆಯಲ್ಲಿ ರೌಡಿಶೀಟರ್ ತೆರೆದರೆ ಹೋರಾಟ: ವಿಜಯೇಂದ್ರ ಎಚ್ಚರಿಕೆ

VIJAYENDRA - Copy
Published on

ಬೆಂಗಳೂರು: ಹನುಮಧ್ವಜ ಘಟನೆಯಲ್ಲಿ ಪ್ರತಿಭಟಿಸಿದವರ ಮೇಲೆ ರೌಡಿಶೀಟರ್ ತೆರೆದದ್ದೇ ಆದಲ್ಲಿ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಕಾರ್ಯಕರ್ತರ ಪರವಾಗಿ ಹೋರಾಟಕ್ಕಿಳಿಯಲಿದೆ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಅವರು ಸಂದೇಶ ಹಂಚಿಕೊಂಡು, ಪೊಲೀಸರು ನೋಟಿಸ್ ನೀಡಿದ್ದನ್ನು ಉಲ್ಲೇಖಿಸಿದ್ದಾರೆ‌. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜಕ್ಕೆ ಆದ ಅಪಮಾನ ಖಂಡಿಸಿ ಹನುಮಭಕ್ತರು ಪ್ರತಿಭಟನೆ ನಡೆಸಿದ್ದರು.

ಇದೀಗ ಹನುಮಭಕ್ತರ ವಿರುದ್ಧ ರೌಡಿಶೀಟರ್ ಪಟ್ಟಿಗೆ ಸೇರ್ಪಡೆ ಮಾಡಲು ಪೊಲೀಸರು ಕ್ರಮವಹಿಸಿದ್ದಾರೆ. ಇದು, ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕಾರಣಕ್ಕೆ ದುರ್ಬಳಕೆಯಾಗುತ್ತಿರುವ ಕಾನೂನು ಅಸ್ತ್ರವಾಗಿದೆ ಎಂದು ಕಿಡಿಕಾರಿದ್ದಾರೆ.

ಗ್ರಾಮೀಣ ಭಾಗದ ಹನುಮ ಭಕ್ತರು ತಮ್ಮ ಭಾವನೆಗಳನ್ನು ಘಾಸಿಗೊಳಿಸಿದ ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು ನಿರೀಕ್ಷಿತ ಘಟನೆಯಾಗಿದೆ. ಆದರೆ ಹಿಂದೂ ಶ್ರದ್ಧೆಯ ಭಕ್ತರು ಹಾಗೂ ಸಂಘಟನೆಗಳ ಕಾರ್ಯಕರ್ತರುಗಳಿಗೆ ಗೂಂಡಾಗಿರಿ ಹಣೆಪಟ್ಟಿ ಕಟ್ಟಲು ಪೊಲೀಸರು ನೋಟೀಸ್ ನೀಡಿರುವುದನ್ನು ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net