ಸಿನಿಮಾಗಳಿಗೆ ವಯಸ್ಸು ಆಧಾರಿತ ಪ್ರಮಾಣಪತ್ರ

Untitled design
Published on

ನವದೆಹಲಿ: ವಯೋಮಾನಕ್ಕೆ ತಕ್ಕನಾದ ಸಿನಿಮಾಗಳನ್ನು ನೋಡಲು ಅನುಕೂಲ ವಾಗುವಂತೆ ವಿಶೇಷವಾಗಿ ಪಾಲಕರಿಗೆ ಮಾರ್ಗದರ್ಶಿಯಾಗಲು ವಯಸ್ಸಿನ ಆಧಾರದಲ್ಲಿ ಸಿನಿಮಾಗಳನ್ನು ವರ್ಗೀಕರಿಸಿ ಪ್ರಮಾಣಪತ್ರ ನೀಡುವ ಹೊಸ ವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಚಲನಚಿತ್ರಗಳ ಸಾರ್ವಜನಿಕ ವೀಕ್ಷಣೆಗೆ ಅನುಮತಿ ಮಂಜೂರು ಮಾಡುವ ತತ್ವಗಳನ್ನು ರೂಪಿಸಿ 1991 ಡಿಸೆಂಬರ್​ನಲ್ಲಿ ಪ್ರಕಟಿಸಲಾಗಿರುವ ನಿಯಮಗಳ ತಿದ್ದುಪಡಿಯನ್ನು ವಾರ್ತೆ ಮತ್ತು ಪ್ರಸಾರ ಸಚಿವಾಲಯ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಸಿನಿಮಾಗಳ ಸ್ವರೂಪ ಮತ್ತು ಕಂಟೆಂಟ್​ನ ರೀತಿಯ ಆಧಾರದಲ್ಲಿ ‘ಯು/ಎ 7+’, ‘ಯು/ಎ 12+’ ಮತ್ತು ‘ಯು/ಎ 16+’ ಮಾರ್ಕರ್​ನೊಂದಿಗೆ ಸಿನಿಮಾಗಳ ಸಾರ್ವತ್ರಿಕ ವೀಕ್ಷಣೆಗೆ ಸರ್ಟಿಫಿಕೆಟ್ ನೀಡಲು ಈ ನಿಯಮಗಳು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಗೆ (ಸಿಬಿಎಫ್​ಸಿ) ಅವಕಾಶ ನೀಡುತ್ತದೆ. ಪ್ರಸ್ತುತ ಸಾಮಾಜಿಕ ಮೌಲ್ಯಗಳಿಗೆ ಅನುಗುಣವಾಗಿ ಹಾಗೂ ವಯಸ್ಸಿಗೆ ತಕ್ಕ ವೀಕ್ಷಣೆಯನ್ನು ಪ್ರವರ್ತಿಸಲು ಸಿಬಿಎಫ್​ಸಿ ಕಳೆದ ವರ್ಷ ಇಂದುಗೊಳಿಸಿದ ಫಿಲ್ಮ್ ಸರ್ಟಿಫಿಕೇಶನ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net