2024ರಲ್ಲೂ ಮೋದಿ ಸರ್ಕಾರ ಗ್ಯಾರಂಟಿ? ದಕ್ಷಿಣ ರಾಜ್ಯಗಳಲ್ಲೂ ಬಿಜೆಪಿಗೆ ಬಹುಪರಾಕ್​

PM modi
Published on

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಖಾಸಗಿ ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ. ಮಹಾರಾಷ್ಟ್ರ, ತೆಲಂಗಾಣ, ಬಿಹಾರ, ಪಂಜಾಬ್​ನಂತಹ ರಾಜ್ಯಗಳಲ್ಲಿ ಪ್ರತಿಪಕ್ಷವಾದ ಇಂಡಿಯಾ ತಂಡ ಉತ್ತಮ ಸಾಧನೆ ಮಾಡಬಹುದು ಎಂದು ಎಬಿಪಿ ನ್ಯೂಸ್ ಮತ್ತು ಸಿ-ವೋಟರ್ ನಡೆಸಿದ ಸಮೀಕ್ಷೆ ಹೇಳಿದೆ.

ಬಿಜೆಪಿ ನೇತೃತ್ವದ ಎನ್​ಡಿಎ 295-335 ಸ್ಥಾನಗಳನ್ನು ಪಡೆಯಲಿದೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅದರಮಿತ್ರಪಕ್ಷಗಳು 165-205 ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆ ಅಂದಾಜು ಮಾಡಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳು ಎನ್​ಡಿಎಗೆ ಸವಾಲಾಗಿವೆ.

ಕಂಪ್ಯೂಟರ್ ಅಸಿಸ್ಟೆಡ್ ಟೆಲಿಫೋನ್ ಇಂಟರ್​ವ್ಯೂಯಿಂಗ್ ಮೂಲಕ ಸಮೀಕ್ಷೆ ನಡೆದಿದೆ. ಡಿ. 15ರಿಂದ ಡಿ. 21ರವರೆಗೆ ಮತದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. 543 ಕ್ಷೇತ್ರಗಳ ನಿಗದಿತ ಸಂಖ್ಯೆಯ ಮತದಾದರನ್ನು ಸಂಪರ್ಕ ಮಾಡಲಾಗಿದೆ. ದೇಶದ ಪೂರ್ವ ವಲಯದಲ್ಲಿ 153 ಕ್ಷೇತ್ರದಲ್ಲಿ ಎನ್​ಡಿಎ 80-90 ಸ್ಥಾನ, ಉತ್ತರ ವಲಯದಲ್ಲಿ 180 ಸ್ಥಾನಗಳ ಪೈಕಿ 150-160 ಸ್ಥಾನ, ಪಶ್ಚಿಮ ವಲಯದಲ್ಲಿ 78ರ ಪೈಕಿ 45-55 ದಕ್ಷಿಣ ವಲಯದಲ್ಲಿ 132 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್​ಗಢ, ರಾಜಸ್ಥಾನ ಇನ್ನಿತರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಮಾಡಲಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿಯೂ ಬಿಜೆಪಿಯು 22-24 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net