More

    ಅಯೋಧ್ಯೆ ರಾಮಮಂದಿರಕ್ಕೆ ಹೈದರಾಬಾದ್​ನಲ್ಲಿ ತಯಾರಾಗುತ್ತಿದೆ ಬಾಗಿಲುಗಳು: ವಿಶೇಷತೆ ಹೀಗಿದೆ…

    ಲಖನೌ: ಮುಂದಿನ ತಿಂಗಳು ಇಡೀ ದೇಶ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಲಿದೆ. ಹಿಂದುಗಳು ಬಹು ದಿನಗಳ ಕನಸಾದ ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜಾಗಿದೆ. ಜ.22 ರಂದು ಶ್ರೀರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದೆ. ಪ್ರಧಾನಿ ಮೋದಿ ಅವರೇ ನೇತೃತ್ವ ವಹಿಸಲಿದ್ದಾರೆ.

    ತಾಜಾ ಸಂಗತಿ ಏನೆಂದರೆ ಹೈದರಾಬಾದ್​ ಮೂಲದ ಅನುರಾಧ ಟಿಂಬರ್ ಇಂಟರ್ನ್ಯಾಷನಲ್ ರಾಮಮಂದಿರದ​ ಬಾಗಿಲುಗಳನ್ನು ತಯಾರಿಸುತ್ತಿದೆ. ಬಾಗಿಲುಗಳಿಗಾಗಿ ಅತ್ಯುನ್ನತ ಗುಣಮಟ್ಟದ ಮರವನ್ನು ಬಳಸಲಾಗಿದೆ. ದೇವಾಲಯದ ಗರ್ಭಗುಡಿಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ‘ನಾಗರ’ ಶೈಲಿಯಲ್ಲಿ ಮತ್ತು ಅಷ್ಟಭುಜಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

    ಸಿಕಂದರಾಬಾದ್‌ನ ನ್ಯೂ ಬೋಯಿನ್‌ಪಲ್ಲಿಯಲ್ಲಿರುವ ಅನುರಾಧ ಟಿಂಬರ್ಸ್ ಇಂಟರ್‌ನ್ಯಾಷನಲ್‌ನಲ್ಲಿ ಬಾಗಿಲುಗಳನ್ನು ತಯಾರಿಸಲಾಗುತ್ತಿದೆ. ಇದಕ್ಕಾಗಿ ಪರಿಣಿತ ಕಲಾವಿದರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸುಂದರವಾದ ಶಿಲ್ಪಗಳನ್ನು ಹೊಂದಿರುವ ಕೆತ್ತಿದ ಬಾಗಿಲುಗಳನ್ನು ಮನಮೋಹಕವಾಗಿ ರಚಿಸಲಾಗುತ್ತಿದೆ.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಗತ್ಯವಿರುವ 100ಕ್ಕೂ ಹೆಚ್ಚು ಬಾಗಿಲುಗಳನ್ನು ಮಾಡುತ್ತಿದ್ದೇವೆ. ಉತ್ತಮ ಗುಣಮಟ್ಟದ ಮರವನ್ನು ಬಾಗಿಲುಗಳ ತಯಾರಿಕೆ ಬಳಸಲಾಗುತ್ತಿದ್ದು, ರಾಮಮಂದಿರ ಉದ್ಘಾಟನೆ ಸಮಯ ಸಮೀಪಿಸುತ್ತಿರುವುದರಿಂದ ಕೆಲಸ ವೇಗ ಹೆಚ್ಚಿದೆ. ಬಾಗಿಲುಗಳಿಗಾಗಿ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಲಾರಶಾದಿಂದ ತಂದ ತೇಗವನ್ನು ಬಳಸಲಾಗುತ್ತಿದೆ ಎಂದು ಕಂಪನಿಯ ಮಾಲೀಕ ಶರತ್ ಬಾಬು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

    ಬಾಗಿಲುಗಳನ್ನು ತಯಾತರಿಸಲು ನಮಗೆ ಸಿಕ್ಕಿರುವ ಅವಕಾಶ ಅದೃಷ್ಟ ಎಂದು ಭಾವಿಸುತ್ತೇವೆ. ನಾವು ಉತ್ತಮ ಗುಣಮಟ್ಟದ ಮರವನ್ನು ಬಳಸುತ್ತಿದ್ದೇವೆ. ಉದಾಹರಣೆಗೆ, ಒಟ್ಟು 100 ಮರದ ತುಂಡುಗಳಲ್ಲಿ ನಾವು 20 ತುಂಡುಗಳನ್ನು ಮಾತ್ರ ಆಯ್ಕೆ ಮಾಡುತ್ತೇವೆ. ಪರಿಣಿತ ಕುಶಲಕರ್ಮಿಗಳು ಬಾಗಿಲುಗಳನ್ನು ತಯಾರಿಸುತ್ತಿದ್ದಾರೆ. ನಾವು ಶೀಘ್ರದಲ್ಲೇ ದೇವಾಲಯದ ಅಧಿಕಾರಿಗಳಿಗೆ ಬಾಗಿಲುಗಲನ್ನು ಹಸ್ತಾಂತರ ಮಾಡುತ್ತೇವೆ ಎಂದು ಶರತ್ ಬಾಬು ಹೇಳಿದರು.

    ಇನ್ನು ಬಾಗಿಲುಗಳಲ್ಲಿ ರಚಿಸಲಾದ ಶಿಲ್ಪ ಕಲೆ ತುಂಬಾ ಚೆನ್ನಾಗಿದೆ ಎನ್ನುತ್ತಾರೆ ಸ್ಥಳೀಯರು. ಅಯೋಧ್ಯೆ ರಾಮಮಂದಿರಕ್ಕೆ ಇಲ್ಲಿನ ಬಾಗಿಲು ಹಾಕುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಸ್ಥಳೀಯರು ಸಂತಸ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

    ವೈದ್ಯಕೀಯ ವಿಮೆಯನ್ನು ಪಡೆಯಲು 24 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವುದು ಅವಶ್ಯಕವೇ?

    ಮಟನ್ ಬಡಿಸದೇ ಅವಮಾನ ಮಾಡಿದ್ದಾರೆ ಅಂತ ಮದುವೆ ರದ್ದು ಮಾಡಿದ ವರನ ಕಡೆಯವರು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts