ಟಿಕ್​​ಟಾಕ್​ ಬ್ಯಾನ್​​ನಿಂದ ಖಿನ್ನತೆ; ಜೀವವನ್ನೇ ಕಳೆದುಕೊಂಡ ಯುವತಿ

Tcktock
Published on

ನವದೆಹಲಿ: ಇತ್ತೀಚೆಗೆಷ್ಟೇ ದೆಹಲಿಯಲ್ಲಿ 16 ವರ್ಷದ ಟಿಕ್​​ಟಾಕ್​ ಸ್ಟಾರ್​ ಓರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಮತ್ತೋರ್ವ ಟಿಕ್​​ಟಾಕ್​ ಸ್ಟಾರ್​ ಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾಗಿದೆ.

ಈಗ ಆತ್ಮಹತ್ಯೆ ಮಾಡಿಕೊಂಡಿರುವವಳಿಗೆ 18 ವರ್ಷ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ಟಿಕ್​ಟಾಕ್​ನಲ್ಲಿ ಸಿಕ್ಕಾಪಟೆ ಸಕ್ರಿಯಳಾಗಿದ್ದಳು. ಅವಳಿಗೆ ಅನೇಕ ಫಾಲೋವರ್ಸ್​ ಕೂಡ ಇದ್ದರು. ಆದರೆ ಈ ಹುಡುಗಿ ಇತ್ತೀಚೆಗೆ ಖಿನ್ನತೆಗೆ ಜಾರಿದ್ದಳು ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ಆದರೆ ಮೃತ ಯುವತಿಯ ಕುಟುಂಬದವರು ಹೇಳುವ ಪ್ರಕಾರ, ಈಕೆ ಕೆಲವು ತಿಂಗಳುಗಳಿಂದಲೂ ಖಿನ್ನತೆಯಿಂದ ಬಳಲುತ್ತಿದ್ದಳು. ಅದರಲ್ಲೂ ಇತ್ತೀಚೆಗೆ ಟಿಕ್​​ಟಾಕ್​ ಬ್ಯಾನ್​ ಮಾಡಿದ ಮೇಲಂತೂ ಇನ್ನಷ್ಟು ಮೌನಕ್ಕೆ ಜಾರಿದ್ದಳು. ಟಿಕ್​ಟಾಕ್​​ಗೆ ಅಡಿಕ್ಟ್​ ಆಗಿದ್ದ ಯುವತಿ, ಅದು ನಿಷೇಧವಾಗುತ್ತಲೇ ಜೀವ ಕಳೆದುಕೊಂಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾ ಸೇನೆ ಹಿಂದೆ ಸರಿದರೂ ಕಾಂಗ್ರೆಸ್​ಗಿಲ್ಲ ಸಮಾಧಾನ; 2013ರಲ್ಲಿ ಮೋದಿಯವರು ಮಾಡಿದ್ದ ಟ್ವೀಟ್​ಗೆ ಈಗ ಉತ್ತರ ಬೇಕಂತೆ…

ಗಡಿಯಲ್ಲಿ ಚೀನಾ ಕ್ಯಾತೆ ಜಾಸ್ತಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ ಚೀನಾದ ಒಟ್ಟು 59 ಆ್ಯಪ್​​ಗಳನ್ನು ಕಳೆದ ತಿಂಗಳು ಬ್ಯಾನ್​ ಮಾಡಿದೆ.

ಟಿಕ್​ಟಾಕ್​ ಬ್ಯಾನ್​ ಮಾಡುವುದಕ್ಕೂ ಮೊದಲೇ ಸ್ವಲ್ಪ ವಾರಗಳ ಹಿಂದೆ ದೆಹಲಿಯ ಸಿಯಾ ಕಕ್ಕರ್​ (16) ಎಂಬ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಳು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net