2 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಬಾಲಕಿಯನ್ನು ಪತ್ತೆ ಮಾಡಿಕೊಟ್ಟ 'ದರ್ಪಣ'!

missing
Published on

ಹೈದರಾಬಾದ್​: ಸಾಮಾನ್ಯ ದರ್ಪಣ(ಕನ್ನಡಿ) ನಮ್ಮೆದುರಿಗಿದ್ದರಷ್ಟೇ ನಮ್ಮ ಮುಖವನ್ನು ತೋರಿಸುತ್ತದೆ. ಆದರೆ ಇಲ್ಲೊಂದು ದರ್ಪಣ, 2 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯ ಮುಖವನ್ನು ಪತ್ತೆ ಮಾಡಿ ತೋರಿಸಿದೆ!

ಏಳು ವರ್ಷದ ಬಾಲಕಿ 2017ರ ಜನವರಿಯಲ್ಲಿ ಹೈದರಾಬಾದ್​ನಲ್ಲಿ ಕಾಣೆಯಾಗಿದ್ದಳು. ಆದರೆ ಇದೀಗ ಆಕೆ ಮಧ್ಯಪ್ರದೇಶದಲ್ಲಿ ಪತ್ತೆಯಾಗಿದ್ದು, ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ. ಇದನ್ನು ಸಾಧ್ಯವಾಗಿಸಿದ್ದು, 'ದರ್ಪಣ'.

ಕಾಣೆಯಾದವರನ್ನು ಪತ್ತೆ ಮಾಡಲೆಂದೇ ತೆಲಂಗಾಣ ಪೊಲೀಸರು ಫೇಸ್​ ರೆಕಗ್ನಿಷನ್​ ಟೆಕ್ನಾಲಜಿ ಅಳವಡಿಸಿರುವ ವ್ಯವಸ್ಥೆಯೊಂದನ್ನು ರೂಪಿಸಿದ್ದು, ಅದಕ್ಕೆ 'ದರ್ಪಣ' ಎಂದು ಹೆಸರಿಟ್ಟಿದ್ದಾರೆ. ಕಾಣೆಯಾದವರ ಫೋಟೋಗಳನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಬಾಲಕಿ ಮಧ್ಯಪ್ರದೇಶದ ಬೇಟುಲ್ ಜಿಲ್ಲೆಯಲ್ಲಿರುವುದನ್ನು ತೆಲಂಗಾಣ ಸಿಐಡಿ ಪೊಲೀಸರು ಕಂಡುಕೊಂಡಿದ್ದಾರೆ.

ಹೀಗೆ ನಾಪತ್ತೆಯಾದವರು ದರ್ಪಣದ ಮೂಲಕ ಮತ್ತೆ ಮನೆಯವರನ್ನು ಸೇರುತ್ತಿರುವ ಪ್ರಕರಣದಲ್ಲಿ ಇದು 18ನೆಯದ್ದು. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂಬುದಾಗಿ ಸಿಐಡಿ ಪೊಲೀಸ್​ ಅಧಿಕಾರಿ ಗೋವಿಂದ್ ಸಿಂಗ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net