ಸ್ಪೀಡ್​ ಬ್ರೇಕರ್​ನಿಂದ ಗಾಳಿಯಲ್ಲಿ ಹಾರಿದ BMW ಕಾರು; ಅಧಿಕಾರಿಗಳು ಮಾಡಿದ್ದೇನು ನೀವೇ ನೋಡಿ

BMW
Published on

ಗುರುಗ್ರಾಮ: ಕೆಲ ದಿನಗಳ ಹಿಂದಷ್ಟೇ ಗುರುಗ್ರಾಮದ ಗಾಲ್ಫ್​ಕೋರ್ಸ್​ ರಸ್ತೆಯಲ್ಲಿ ಸ್ಪೀಡ್​ ಬ್ರೇಕರ್​ನಿಂದಾಗಿ ಕಾರುಗಳು ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ವಿಚಾರ ರಾಷ್ಟ್ರವ್ಯಾಪಿ ಸಖತ್​ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು ಮತ್ತು ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಕಿಡಿಕಾರಿದ್ದರು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚೆತ್ತಿದ್ದು, ಎಚ್ಚರಿಕೆಯ ಬೋರ್ಡ್​ಗಳನ್ನು ಅಳವಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಹೊಸದಾಗಿ ಹಾಕಿದ್ದ ಸ್ಪೀಡ್​ಬ್ರೇಕರ್​ನಿಂದ BMW ಕಾರೊಂದು ಹಾರಿ ದೂರದಲ್ಲಿ ಹಾರಿ ಲ್ಯಾಂಡ್​ ಆಗಿತ್ತು. ಇದಾದ ಬಳಿಕ ಎರಡು ಲಾರಿಗಳು ಕೂಡ ಇದೇ ರೀತಿ ಹಾರಿದ್ದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿತ್ತು.

ಇದೀಗ ಸಂಭಾವ್ಯ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆತ್ತಿದ್ದು, ಸ್ಪೀಡ್​ಬ್ರೇಕರ್​ ಇರುವ ಬಗ್ಗೆ ಬೋರ್ಡ್​ಅನ್ನು ಹಾಕಿದ್ದಾರೆ. ಇದಲ್ಲದೆ ರೋಡ್​ನಲ್ಲಿ ರಿಫ್ಲೇಕ್ಟರ್​ಗಳನ್ನು ಇಟ್ಟಿದ್ದಾರೆ. ಇದಲ್ಲದೆ ಅಧಿಕಾರಿಗಳನ್ನು ವೇಗವಾಗಿ ಬರುವ ವಾಹನಗಳಿಗೆ ದಂಡ ವಿಧಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net