15 ವರ್ಷದಿಂದ 10 ಬಾರಿ ರಿಜೆಕ್ಟ್​ ಆದ 3.7 ಅಡಿ ಯುವಕ 4 ಅಡಿ ಯುವತಿಯನ್ನು ವಿವಾಹವಾದ

3ftman
Published on

ಉತ್ತರಪ್ರದೇಶ: ಮದುವೆಯ ವಿಚಾರದಲ್ಲಿ ದೇವರು ಯಾರಿಗೆ ಯಾರ ಜತೆ ಎಂದು ಮೊದಲೇ ಫಿಕ್ಸ್ ಮಾಡಿರುತ್ತಾನೆ ಎಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಎಷ್ಟೊ ಯುವಕ, ಯುವತಿಯರು ಅವರಿಗೆ ಇಷ್ಟವಾಗುವ ಜೀವನ ಸಂಗಾತಿಗಾಗಿ ಹುಡುಕಾಡಿ ಸೋತೆವು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಯುವಕ 15 ವರ್ಷಗಳಿಂದ ವಧುಗಾಗಿ ಹುಡುಕಾಡಿ ಕೊನೆಗೂ ಮದುವೆಯಾಗಿದ್ದಾನೆ.

ಮೊಹಮ್ಮದ್ ಅರ್ಷದ್ ವಧುಗಾಗಿ 15 ವರ್ಷಗಳ ಹುಡುಕಾಡಿ 10 ನಿರಾಕರಣೆಗಳ ನಂತರ, ಅವನು ತನ್ನಗೆ ಮ್ಯಾಚ್​ ಆಗುವ ಹುಡುಗಿಯನ್ನು ಕಂಡುಕೊಂಡಿದ್ದಾನೆ. ಹುಡುಗಿಯನ್ನು ನೋಡಲು ಹೋದಾಗಲೆಲ್ಲ ಅವನ ಎತ್ತರದ ಚಿಂತೆ.. ಅನೇಕ ಸ್ನೇಹಿತರು ಮತ್ತು ಸಂಬಂಧಿಕರು ಅವರನ್ನು ಕೀಳಾಗಿ ಕಾಣುತ್ತಿದ್ದರಂತೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಅರ್ಷದ್‌. ಬುಲಂದ್‌ಶಹರ್ ಜಿಲ್ಲೆಯ ಸಯಾನಾ ನಗರದ 35 ವರ್ಷದ ಮೊಹಮ್ಮದ್ ಅರ್ಷದ್ ಪೀಠೋಪಕರಣ ವ್ಯಾಪಾರ ಮಾಡುತ್ತಿದ್ದು, ಆದರೆ ಅವರು ಕೇವಲ 3.7 ಅಡಿ ಎತ್ತರ ಬೆಳೆದರು. ಹಾಗಾಗಿ ಆತನನ್ನು ಮದುವೆಯಾಗಲು ಯಾರೂ ಮುಂದೆ ಬರಲಿಲ್ಲ. ಆದರೆ, ವಯಸ್ಸು ಹೆಚ್ಚುತ್ತಲೇ ಹೋಗುತ್ತದೆ. ಕೊನೆಗೂ 15 ವರ್ಷಗಳ ಕಾದಾಟದ ನಂತರ ಅರ್ಷದ್‌ಗೆ ಸರಿಯಾದ ಜೀವನ ಸಂಗಾತಿ ಸಿಕ್ಕಿದ್ದಾಳೆ.

ಅವನಿಗೆ ಮದುವೆಯ ಚಿಂತೆ ಇತ್ತು. ಅರ್ಷದ್ ಸ್ಥಿತಿ ಕಂಡು ಕುಟುಂಬಸ್ಥರೂ ಚಿಂತಾಕ್ರಾಂತರಾಗಿದ್ದರು. ಮೇಲಾಗಿ ಸುತ್ತಲಿದ್ದವರೂ ಅವನನ್ನು ಅಪಹಾಸ್ಯದಿಂದ ನೋಡುತ್ತಿದ್ದರು. ಆದರೆ ಪ್ರತಿ ಬಾರಿಯೂ ಅವರು ಅವಮಾನಗಳನ್ನು ಎದುರಿಸಿದರು. ಸಂಬಂಧಿಕರೊಬ್ಬರು 4 ಅಡಿ ಎತ್ತರದ ಸೋನಾ ಬಗ್ಗೆ ಹೇಳಿದ್ದರು. ನಂತರ ಅರ್ಷದ್ ಕುಟುಂಬಸ್ಥರು ತೆರಳಿ ಸೋನಾ ಮನೆಯವರ ಬಳಿ ಮಾತುಕತೆ ನಡೆಸಿದ್ದಾರೆ. ಅವರು ಅಂತಿಮವಾಗಿ ಫೆಬ್ರವರಿ 14 ರ ಬುಧವಾರದಂದು ಪ್ರೇಮಿಗಳ ದಿನದಂದು 30 ವರ್ಷದ ಸೋನಾ ಅವರನ್ನು ವಿವಾಹವಾದರು. ಅರ್ಷದ್ ಗೆಳೆಯರು ನಗರದೆಲ್ಲೆಡೆ ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net