ಮುಂಬೈ: ದೇಶದ ವಾಣಿಜ್ಯ ಜಗತ್ತಿನ 124 ವರ್ಷ ಹಳೆಯ ಗೋದ್ರೆಜ್ ಸಾಮ್ರಾಜ್ಯ ಈಗ ವಿಭಜನೆಯ ಹಾದಿಯಲ್ಲಿದೆ. ಸೌಹಾರ್ದಯುತವಾಗಿ ಪಾಲುಪಂಚಾಯಿತಿ ಮೂಲಕ ಕಂಪನಿಗಳ ಹಂಚುವಿಕೆಗೆ ಕೆಲವು ವರ್ಷಗಳ ಹಿಂದೆಯೇ ಗೋದ್ರೆಜ್ ಕುಟುಂಬ ಸದಸ್ಯರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಗೋದ್ರೆಜ್ ಕಂಪನಿ ಎರಡಾಗಿ ವಿಭಜನೆಯಾಗುವ ಸಾಧ್ಯತೆ ಇದೆ. ಆದಿ ಗೋದ್ರೆಜ್, ನಾದಿರ್ ಗೋದ್ರೆಜ್ ಮತ್ತು ಕುಟುಂಬ (ಗೋದ್ರೆಜ್ ಇಂಡಸ್ಟ್ರೀಸ್ ಆ್ಯಂಡ್ ಅಸೋಸಿಯೇಟ್ಸ್) ಒಂದಾದರೆ, ಜಮ್ಶಿಡ್ ಗೋದ್ರೆಜ್ ಮತ್ತು ಕುಟುಂಬ (ಗೋದ್ರೆಜ್ ಆ್ಯಂಡ್ ಬಾಯ್ಸ್ (ಜಿಆ್ಯಂಡ್ಬಿ) ಇನ್ನೊಂದು. ಗೋದ್ರೆಜ್ ಸಾಮ್ರಾಜ್ಯದ ಒಟ್ಟು ಮೌಲ್ಯ ಸದ್ಯ 29966 ಕೋಟಿ ರೂಪಾಯಿ ಎಂದು ಷೇರುಪೇಟೆ ದತ್ತಾಂಶ ಹೇಳುತ್ತಿದೆ.

ಗೋದ್ರೆಜ್ ಗ್ರೂಪ್ನಲ್ಲಿ ಪ್ರಮೊಟರ್ ಹೋಲ್ಡಿಂಗ್ನಲ್ಲಿ ಶೇಕಡ 23 ಟ್ರಸ್ಟ್ ವಶದಲ್ಲಿದೆ. ಅದು ಲಾಭಾಂಶವನ್ನು ಪರಿಸರ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ. ಗೋದ್ರೆಜ್ ಇಂಡಸ್ಟ್ರೀಸ್, ಜಿಆ್ಯಂಡ್ಬಿ ಹೊರತಾಗಿ, ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ ್ಸ ಲಿಮಿಟೆಡ್, ಗೋದ್ರೆಜ್ ಅಗ್ರೋವೆಟ್, ಗೋದ್ರೆಜ್ ಪ್ರಾಪರ್ಟೀಸ್ಗಳಿವೆ. ಆದಿ ಮತ್ತು ನಾದಿರ್ ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ ್ಸ, ಗೋದ್ರೆಜ್ ಅಗ್ರೋವೆಟ್, ಗೋದ್ರೆಜ್ ಪ್ರಾಪರ್ಟೀಸ್, ಗೋದ್ರೆಜ್ ಇಂಡಸ್ಟ್ರೀಸ್ ಅನ್ನು ನಿರ್ವಹಿಸುತ್ತಿದ್ದಾರೆ. ಜಮ್ಶಿಡ್ ಅವರು ಗೋದ್ರೆಜ್ ಆ್ಯಂಡ್ ಬಾಯ್ಸ್ನ್ನು ನಿರ್ವಹಿಸುತ್ತಿದ್ದಾರೆ. ಗೋದ್ರೆಜ್ ಚೇರ್ಮನ್ ಸ್ಥಾನದಿಂದ ನಿರ್ಗಮಿಸುತ್ತಿರುವುದಾಗಿ ಆದಿ ಗೋದ್ರೆಜ್ (76) ಆಗಸ್ಟ್ ತಿಂಗಳಲ್ಲಿ ಘೋಷಿಸಿದ್ದರು. ಅವರ ಮಕ್ಕಳು ಒಬ್ಬೊಬ್ಬರು ಒಂದೊಂದು ಕಂಪನಿಯ ಉಸ್ತುವಾರಿ ಗಮನಿಸಲಾರಂಭಿಸಿದ್ದು, ಚೇರ್ಮನ್ ಸ್ಥಾನದ ಹೊಣೆಗಾರಿಕೆಯನ್ನು ನಾದಿರ್ಗೆ ಆದಿ ಹಸ್ತಾಂತರಿಸಿದ್ದಾರೆ. ಜಿಮ್ಶಿಡ್ ಅವರ ಸಹೋದರಿ ಸ್ಮಿತಾ ವ್ಯಾಪಾರದಲ್ಲಿ ಸಕ್ರಿಯರಾಗಿಲ್ಲದೇ ಹೋದರೂ ಅವರ ಪತಿ ವಿಜಯ್ ಕೃಷ್ಣಾ ಗೋದ್ರೆಜ್ ಇಂಡಸ್ಟ್ರೀಸ್, ಗೋದ್ರೆಜ್ ಅಗ್ರೋವೆಟ್ಗಳಲ್ಲಿ ನಿರ್ದೇಶಕರು ಮತ್ತು ಗೋದ್ರೆಜ್ ಆ್ಯಂಡ್ ಬಾಯ್ಸ್ನಲ್ಲಿ ನಾನ್&ಎಕ್ಸಿಕ್ಯೂಟವ್ ಡೈರೆಕ್ಟರ್ ಆಗಿದ್ದಾರೆ. ಸೌಹಾರ್ದಯುತವಾಗಿ ಪಾಲುಪಂಚಾಯಿತಿ ಮುಗಿಸಲು ಕುಟುಂಬ ಮುಂದಾಗಿದ್ದು, ಅದು ಈಗ ಅಂತಿಮ ಹಂತಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಗೋದ್ರೆಜ್ ಸಾಮ್ರಾಜ್ಯದ ಚಿತ್ರಣ
ರಿಶದ್, ಆದಿ, ನಾದಿರ್, ಜಮ್ಶಿಡ್ ಮತ್ತು ಸ್ಮಿತಾ ಕೃಷ್ಣಾ ಈ ಐದು ಕುಟುಂಬ ಶಾಖೆಗಳ ನಡುವೆ ಗೋದ್ರೆಜ್ ಸಾಮ್ರಾಜ್ಯ ಹಂಚಿಕೊಂಡಿದೆ. ಜಿಆ್ಯಂಡ್ಬಿನಲ್ಲಿ ಪ್ರತಿ ಕುಟುಂಬಕ್ಕೆ ಶೇಕಡ 15.3 ಪಾಲಿದೆ. ಅದೇ ರೀತಿ ಪಿರೋಜ್ ಶಾ ಗೋದ್ರೆಜ್ ೌಂಡೇಷನ್ಗೆ ಶೇಕಡ 23 ಪಾಲಿದೆ.'