ಅಫ್ರಿಕನ್ ಜ್ವರ ಆತಂಕ, ಸೋಂಕಿಗೆ ಫಾರ್ಮ್ ನಲ್ಲಿ ಹಂದಿಗಳ ಸಾವು

IMG_20250829_225859.jpg
Published on

ಚಿಕ್ಕಬಳ್ಳಾಪುರ: ಚಿಂತಾಮಣಿ  ತಾಲೂಕಿನ ಹೆಬ್ಬರಿ ಗ್ರಾಮದಲ್ಲಿನ ಖಾಸಗಿ ಫಾರ್ಮಾನಲ್ಲಿ ಕಳೆದ ಒಂದು ವಾರದಲ್ಲಿ 100 ಕ್ಕೂ ಹಂದಿಗಳು ಮೃತಪಟ್ಟಿದ್ದು ಇದಕ್ಕೆ ಹಂದಿಜ್ವರ ಕಾರಣ ಎಂಬುದು ದೃಢಪಟ್ಟಿದೆ.
ಸೂಕ್ತ ಚಿಕಿತ್ಸೆ ನೀಡಿದರೂ ಹಂದಿಗಳ ಸಾವಿನ ಸರಣಿ ನಿಲ್ಲದ ಹಿನ್ನೆಲೆಯಲ್ಲಿ ಪಶು ವೈದ್ಯರು ಅನುಮಾನಗೊಂಡು ಸಾವಿಗೆ ಕಾರಣ ತಿಳಿಯಲು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಇದರ ವರದಿ ಬಂದಿದ್ದು ವೈಜ್ಞಾನಿಕ ಪರೀಕ್ಷೆಯಲ್ಲಿ ಹಂದಿ ಜ್ವರದ ಕಾಯಿಲೆಯಿಂದ ಸಾವು ಸಂಭವಿಸಿರುವುದು ತಿಳಿದು ಬಂದಿದೆ. ಇದರಿಂದ ಕಾರ್ಯ ಪ್ರವೃತ್ತರಾದ ಪಶು ಪಾಲನಾ ಹಾಗೂ ಪಶು ವೈದ್ಯ ಸೇವಾ ಇಲಾಖೆಯು ಸೋಂಕು ನಿವಾರಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿಯವರೆಗೂ ಫಾರ್ಮ್ ನಲ್ಲಿ ಹಂತ ಹಂತವಾಗಿ 100 ಹಂದಿಗಳು ಮೃತಪಟ್ಟಿವೆ. ಇದೀಗ ಉಳಿದಿರುವ 75 ಹಂದಿಗಳನ್ನೂ ಸೋಂಕು ಹರಡದಿರಲು ಎಲೆಕ್ಟ್ರಿಕ್ ಶಾಕ್ ನೀಡಿ ಕೊಲ್ಲಲಾಗಿದೆ.

*ಆಫ್ರಿಕನ್ ಹಂದಿ ಜ್ವರ*
ಆಫ್ರಿಕನ್ ಹಂದಿ ಸೋಂಕು ಪತ್ತೆಯಾಗಿರುವುದು ಸ್ಥಳೀಯವಾಗಿ ಆತಂಕ ಮೂಡಿಸಿದೆ.
ವೆಂಕಟರೆಡ್ಡಿ ಎಂಬುವರಿಗೆ ಸೇರಿದ್ದ ಫಾರ್ಮ್ ನಲ್ಲಿ ನ ಯಾರ್ಕ್ ಶೇರ್ ತಳಿಯ ಹಂದಿಗಳಲ್ಲಿ ಸೋಂಕು ಕಂಡು ಬಂದಿದೆ. ಮಾಲೀಕರು ಬೆಂಗಳೂರು ಉತ್ತರ ಜಿಲ್ಲೆಯ ಹೊಸಕೋಟೆಯಿಂದ ನಾಗಲ್ಯಾಂಡ್ ಸೇರಿದಂತೆ ಬೇರೆ ಬೇರೆ ಭಾಗಗಳಿಗೆ ಹಂದಿಗಳನ್ನು ಸಾಗಿಸುತ್ತಿದ್ದರು. ಇದರಿಂದ ಬೇರೆ ಬೇರೆ ಹಂದಿಗಳಿಗೆ ಸೋಂಕು ಹರಡುವ ಸಾಧ್ಯತೆಯ ಆತಂಕ ವ್ಯಕ್ತವಾಗಿದೆ. ಇದರ ನಡುವೆ ಹಂದಿಗಳಿಂದ ಮನುಷ್ಯನಿಗೆ ಈ ಕಾಯಿಲೆ ಬರುವುದಿಲ್ಲ ಎಂದು ಪಶುಪಾಲನಾ ಹಾಗೂ ಪಶು ವೈದ್ಯ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net