ಪಾಕ್​ ವೈಮಾನಿಕ ದಾಳಿಗೆ ಪ್ರತೀಕಾರ: ಗಡಿಯುದ್ದಕ್ಕೂ Afghan-Pakistan ಪಡೆಗಳ ನಡುವೆ ಗುಂಡಿನ ಚಕಮಕಿ!

Untitled design - 2025-10-12T072533.652
Published on

Afghan-Pakistan : ಇತ್ತೀಚಿಗೆ ಕಾಬೂಲ್‌ನಲ್ಲಿ ಪಾಕಿಸ್ತಾನಿ ವೈಮಾನಿಕ ದಾಳಿಯ ನಂತರ, ಶನಿವಾರ ತಡರಾತ್ರಿ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಭಾನುವಾರ ವರದಿಯಾಗಿದೆ.

ತಾಲಿಬಾನ್ ಪಡೆಗಳು ಮೂರು ಪಾಕಿಸ್ತಾನಿ ಗಡಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡಿವೆ ಎಂದು ಹೇಳಿಕೊಂಡಿವೆ. ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ತಮ್ಮ ಸೇನೆಯು ಹಲವಾರು ಆಫ್ಘನ್ ಪೋಸ್ಟ್‌ಗಳನ್ನು ನಾಶಪಡಿಸಿದೆ ಎಂದು ತಾಲಿಬಾನ್​ ಹೇಳಿಕೊಂಡಿದೆ.

ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಹಂಚಿಕೊಂಡ ವೀಡಿಯೊ ದೃಶ್ಯಾವಳಿಗಳು ಅಫ್ಘಾನಿಸ್ತಾನದ ಕಡೆಗೆ ಬಂದೂಕು ಮತ್ತು ಫಿರಂಗಿಗಳಿಂದ ಗುಂಡು ಹಾರಿಸುವುದನ್ನು ತೋರಿಸಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಪಾಕಿಸ್ತಾನಿ ವೈಮಾನಿಕ ದಾಳಿಗಳಿಗೆ ಪ್ರತೀಕಾರ

ಪಾಕಿಸ್ತಾನವು ಅಫ್ಘಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದ್ದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖೋವಾರಾಜ್ಮಿ ಹೇಳಿದ್ದಾರೆ. ಸ್ಥಳೀಯ ಸಮಯ ಮಧ್ಯರಾತ್ರಿಯಲ್ಲಿ ದಾಳಿ ಕೊನೆಗೊಂಡಿತು ಎಂದು ಅವರು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net