Amir Khan Muttaqi | ಆಕ್ರೋಶದ ಬೆನ್ನಲ್ಲೆ ಮಹಿಳಾ ಪತ್ರಕರ್ತರನ್ನು ಹೊಸ ಪತ್ರಿಕಾಗೋಷ್ಠಿಗೆ ಆಹ್ವಾನಿಸಿದ ಅಫ್ಘಾನ್ ವಿದೇಶಾಂಗ ಸಚಿವ ಮುತ್ತಕಿ

Amir Khan Muttaqi
Published on

Amir Khan Muttaqi: ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾನುವಾರ ನವದೆಹಲಿಯಲ್ಲಿ ಮತ್ತೊಂದು ಪತ್ರಿಕಾಗೋಷ್ಠಿ ಕರೆದಿದ್ದು, ಈ ಬಾರಿ ಮಹಿಳಾ ಪತ್ರಕರ್ತರನ್ನು ಆಹ್ವಾನಿಸಿದ್ದಾರೆ. ಅಲ್ಲದೆ, ಹಿಂದಿನ ಮಾಧ್ಯಮ ಸಂವಾದದಿಂದ ಹೊರಗಿಟ್ಟಿದ್ದಕ್ಕಾಗಿ ಆಕ್ರೋಶ ವ್ಯಕ್ತವಾದ ನಂತರ ಈ ಬಾರಿ ಮಹಿಳೆಯರನ್ನು ಕರೆದಿದ್ದಾರೆ.

ಒಂದು ವಾರದ ಭೇಟಿಗಾಗಿ ಭಾರತದಲ್ಲಿರುವ ಮುತಾಕಿ ಹಿಂದಿನ ಪತ್ರಿಕಾ ಸಂವಾದದಲ್ಲಿ ಮಹಿಳಾ ಪತ್ರಕರ್ತರೇ ಇರಲಿಲ್ಲ. ಅದರೆ, ನಂತರ ಮುತ್ತಕಿ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಅಕ್ಟೋಬರ್ 10 ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲಿಬಾನ್ ನಾಯಕ ಪುರುಷರು ಮಾತ್ರ ಪತ್ರಿಕಾಗೋಷ್ಠಿಯಲ್ಲಿ ಭಾಗವಾಯಿಸಬೇಕು ಎಂದು ಹೇಳಿದ್ದರು. ಇದು ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ಮಹಿಳಾ ಹಕ್ಕುಗಳ ವಕೀಲರಿಂದ ಖಂಡನೆಗೆ ಕಾರಣವಾಯಿತು.

ಈ ಘಟನೆಯನ್ನು ಭಾರತೀಯ ಸಂಪಾದಕರ ಸಂಘ ಮತ್ತು ಭಾರತೀಯ ಮಹಿಳಾ ಪತ್ರಿಕಾ ದಳ (ಐಡಬ್ಲ್ಯೂಪಿಸಿ) ಮಹಿಳಾ ಪತ್ರಕರ್ತರನ್ನು ಹೊರಗಿಡುವುದನ್ನು ಅತ್ಯಂತ ತಾರತಮ್ಯ ಎಂದು ತೀವ್ರವಾಗಿ ಟೀಕಿಸಿದ್ದಾರೆ.

ವಿಯೆನ್ನಾ ಸಮಾವೇಶದ ಅಡಿಯಲ್ಲಿ ರಾಜತಾಂತ್ರಿಕ ಆವರಣಗಳು ರಕ್ಷಣೆಯನ್ನು ಕೋರಬಹುದಾದರೂ, ಭಾರತೀಯ ನೆಲದಲ್ಲಿ ಪತ್ರಿಕಾ ಪ್ರವೇಶದಲ್ಲಿ ಸ್ಪಷ್ಟ ಲಿಂಗ ತಾರತಮ್ಯವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಗಿಲ್ಡ್ ಒಂದು ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ತಾರತಮ್ಯಯು ಮರುಕಳಿಸದಂತೆ ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಅಫ್ಘನ್​ ರಾಯಭಾರ ಕಚೇರಿಯೊಂದಿಗೆ ಈ ವಿಷಯವನ್ನು ಎತ್ತಬೇಕೆಂದು ಐಡಬ್ಲ್ಯೂಪಿಸಿ ತೀವ್ರವಾಗಿ ಒತ್ತಾಯಿಸಿದೆ.

ಅದರೆ ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ (MEA) ಈ ಕಾರ್ಯಕ್ರಮದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ನಿನ್ನೆ ದೆಹಲಿಯಲ್ಲಿ ಅಫ್ಘನ್​ ವಿದೇಶಾಂಗ ಸಚಿವ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ MEA ಯಾವುದೇ ಪಾತ್ರ ವಹಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯವು ಈ ಕಾರ್ಯಕ್ರಮವನ್ನು ಸಂಘಟಿಸಿದ್ದಾರೋ ಇಲ್ಲವೋ, ಆದರೆ ಇಂತಹ ತಾರತಮ್ಯದ ಹೊರಗಿಡುವಿಕೆಯನ್ನು ಯಾವುದೇ ಆಕ್ಷೇಪಣೆಯಿಲ್ಲದೆ ಮುಂದುವರಿಸಲು ಅನುಮತಿಸಿರುವುದು ತೀವ್ರ ಕಳವಳಕಾರಿಯಾಗಿದೆ ಎಂದು ಗಿಲ್ಡ್ ಪ್ರತಿಕ್ರಿಯಿಸಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net