ಬಾಡಿಗಾರ್ಡ್​ನೊಂದಿಗೇ ಅಫೇರ್​ ಇಟ್ಟುಕೊಂಡ ರಾಜಕುಮಾರಿ! ವಿಷಯ ಮುಚ್ಚಿಡಲು ಕೊಟ್ಟಿದ್ದು 12 ಕೋಟಿ ರೂ!

princess
Published on

ದುಬೈ: ರಾಜ ಮನೆತನದಲ್ಲಿ ಏನೇ ಒಂದು ಸಣ್ಣ ವಿಚಾರವಾದರೂ ಅದು ದೊಡ್ಡ ಸುದ್ದಿಯಾಗಿಬಿಡುತ್ತದೆ. ಹಾಗಿದ್ದಾಗ ಈ ರಾಜಮನೆತನದ ರಾಜಕುಮಾರನ ಪತ್ನಿಗೆ ಆಕೆಯ ಬಾಡಿಗಾರ್ಡ್​ನೊಂದಿಗೇ ಅಕ್ರಮ ಸಂಬಂಧ ಬೆಳೆದಿದೆ. ಈ ವಿಚಾರವನ್ನು ಮುಚ್ಚಿಡಲು ಆಕೆ ಮಾಡಿದ ಕಸರತ್ತು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.

ದುಬೈನ ರಾಜಕುಮಾರ ಶೇಖ್​ ಮೊಹಮ್ಮದ್​ ಬಿನ್​ ರಶೀದ್​ ಅಲ್​ ಮಕ್ತೌಮ್​ ಅವರಿಗೆ ಆರು ಮದುವೆಯಾಗಿದೆ. ಅವರ ಆರನೇ ಪತ್ನಿ ಹಯಾ ಅವರಿಗೆ ರಸ್ಸೆಲ್​ ಹೆಸರಿನ ಬಾಡಿಗಾರ್ಡ್​ ಇದ್ದನಂತೆ. 2016ರಲ್ಲಿ ರಸ್ಸೆಲ್​ ಮತ್ತು ಹಯಾ ನಡುವೆ ಅಕ್ರಮ ಸಂಬಂಧ ಶುರುವಾಗಿದೆ. ಈ ಸಂಬಂಧ ಸುಮಾರು ಎರಡು ವರ್ಷಗಳ ಕಾಲ ಮುಂದುವರಿದಿದೆ. ಅದಾದ ನಂತರ ರಸ್ಸೆಲ್​ನೊಂದಿಗೆ ದುಬೈನಿಂದ ಲಂಡನ್​ಗೆ ಹಾರಿದ ಹಯಾ ಅಲ್ಲಿಯೇ ಜೀವನ ನಡೆಸಲಾರಂಭಿಸಿದ್ದಾಳೆ.

ಈಗ ಈ ವಿಚಾರ ಸುದ್ದಿಗೆ ಬರಲು ಒಂದು ಕಾರಣವಿದೆ. ಹಯಾ ದುಬೈನಲ್ಲಿದ್ದಾಗ ಪತಿಗೆ ಅಕ್ರಮ ಸಂಬಂಧದ ವಿಚಾರ ತಿಳಿಯದಿರುವಂತೆ ಕಾಪಾಡಿಕೊಳ್ಳುವ ಸಲುವಾಗಿ ರಸ್ಸೆಲ್​ಗೆ ಸುಮಾರು 12 ಕೋಟಿ ರೂಪಾಯಿ ನೀಡಿದ್ದಳಂತೆ. ಅಷ್ಟೇ ಅಲ್ಲದೆ ಇವರಿಬ್ಬರ ಬಗ್ಗೆ ಗೊತ್ತಿದ್ದ ಮೂರು ಇತರೆ ಕೆಲಸಗಾರರಿಗೂ ಕೋಟಿ ಕೋಟಿ ಹಣ ನೀಡಿದ್ದಳಂತೆ. ಒಂದು ಸೀಕ್ರೇಟ್​ ಕಾಪಾಡಿಕೊಳ್ಳಬೇಕೆಂದು ರಸ್ಸೆಲ್​ಗೆ ಕೋಟಿ ಕೋಟಿ ಬೆಲೆ ಬಾಳುವ ಉಡುಗೊರೆಯನ್ನು ಕೊಟ್ಟಿದ್ದಳಂತೆ. ಈ ಎಲ್ಲ ವಿಚಾರಗಳು ಇದೀಗ ಬೆಳಕಿಗೆ ಬಂದಿವೆ.

ಬಾಡಿಗಾರ್ಡ್​ನೊಂದಿಗೆ ಸಂಬಂಧ ಬೆಳೆಸಿಕೊಂಡ ಪತ್ನಿಗೆ ರಾಜಕುಮಾರ 2019ರಲ್ಲಿಯೇ ವಿಚ್ಛೇದನ ನೀಡಿದ್ದಾನೆ. ಆಕೆಗೆ ಯಾವುದೇ ಮಾಹಿತಿ ನೀಡದಂತೆಯೇ ಷರಿಯಾ ಕಾನೂನಿನ ಪ್ರಕಾರ ವಿಚ್ಛೇದನ ನೀಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net