ಡಿಜಿಟಲ್​ ಜಾಹೀರಾತು ಬೋರ್ಡ್​ನಲ್ಲಿ ಪ್ರಸಾರವಾಯ್ತು ಸೆ* ವಿಡಿಯೋ; ಮುಂದೇನಾಯ್ತು ನೀವೇ ನೋಡಿ

Connaught Place
Published on

ನವದೆಹಲಿ: ಜನನಿಬಿಡ ಪ್ರದೇಶ ಒಂದರಲ್ಲಿ ಹಾಕಲಾಗಿದ್ದ ಡಿಜಿಟಲ್ ಜಾಹೀರಾತು ಫಲಕದಲ್ಲಿ ಸೆಕ್ಸ್​ ವಿಡಿಯೋ ಪ್ರಸಾರವಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಕನ್ನಾಟ್ ಪ್ಲೇಸ್‍ನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು FIR ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಾರುಕಟ್ಟೆಯ ಹೆಚ್-ಬ್ಲಾಕ್‍ನಲ್ಲಿ ಈ ಘಟನೆ ನಡೆದಿದ್ದು, ಕ್ತಿಯೊಬ್ಬ ಜಾಹೀರಾತು ಫಲಕವನ್ನು ವೀಡಿಯೋ ಮಾಡಿಕೊಂಡು ಪೋಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವು ಸೆಕೆಂಡುಗಳ ಕಾಲ ಪ್ಲೇ ಆಗಿದ್ದ ಕ್ಲಿಪ್‍ನ್ನು ನವದೆಹಲಿ ಮುನ್ಸಿಪಲ್ ಅಧಿಕಾರಿಗಳ ಸಹಾಯದಿಂದ ತೆಗೆದುಹಾಕಲಾಗಿದ್ದು, ಸ್ಕ್ರೀನ್​ ಹ್ಯಾಕ್​ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆ ಸಂಬಂಧ ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಕನ್ನಟ್​ ಪ್ಲೇಸ್​ನಲ್ಲಿ ಹಾಕಲಾಗಿದ್ದ ಡಿಜಿಟಲ್​ ಜಾಹೀರಾತು ಫಲಕದಲ್ಲಿ ಅಶ್ಲೀಲ ವಿಡಿಯೋ ಹಾಕಲಾಗಿದ್ದು, ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಕ್ರೀನ್​ಅನ್ನು ಹ್ಯಾಕ್​ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ದಾರಿಹೋಕರೊಬ್ಬರು ಇದನ್ನು ಗಮನಿಸಿ ವಿಡಿಯೋ ಮಾಡಿಕೊಂಡು ಕೂಡಲೇ ನಮಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಸರಿಪಡಿಸಲಾಗಿದೆ. ಈ ಸಂಬಂಧ FIR ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net