ಮಹನೀಯರ ಆದರ್ಶ ಅಳವಡಿಸಿಕೊಳ್ಳಿ

narayanaguru, nuliya
ಕಡೂರು ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಎಂ.ಪಿ. ಕವಿರಾಜ್, ಭಂಡಾರಿಶ್ರೀನಿವಾಸ್, ಗಿರೀಶ್, ಸಿದ್ದಪ್ಪ, ಡಾ. ರವಿಕುಮಾರ್ ಮತ್ತಿತರಿದ್ದರು.
Published on

ಕಡೂರು: ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಾಧಕರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಮತ್ತು ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನುಲಿಯ ಚಂದಯ್ಯ ಅವರು ಬಸವಣ್ಣನ ಅನುಭವ ಮಂಟಪದಲ್ಲಿ ವಚನಕಾರರಾಗಿ ಕಾಯಕದ ಮೂಲಕ ದೇವರನ್ನು ಕಂಡ ಮಹಾನ್ ಶರಣ. ದುಡಿದು ಜೀವನ ಮಾಡಿ ಎಂಬ ಸಂದೇಶ ನೀಡಿದ್ದಾರೆ. ಕಾಯಕ ನಿಷ್ಠೆಯ ದುಡಿಮೆಯಲ್ಲಿ ದಾಸೋಹ ನಡೆಸುತ್ತಿದ್ದರು ಎಂದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ನುಲಿಯ ಚಂದಯ್ಯ ಅವರು ಕಾಯಕ ಮತ್ತು ದಾಸೋಹಕ್ಕೆ ಆದ್ಯತೆ ನೀಡಿದ್ದರು. ವಚನಗಳ ಮೂಲಕ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದರು. ಸಾಮಾಜಿಕ ನ್ಯಾಯದಡಿ ಹೋರಾಡಿದ ಕ್ರಾಂತಿ ಪುರುಷ. ಸರ್ಕಾರದಿಂದಲೇ ಜಯಂತಿ ಆಚರಿಸುವ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರಲು ಆದ್ಯತೆ ನೀಡಿದೆ ಎಂದು ಹೇಳಿದರು.
ಕುಳುವ ಸಮಾಜದ ತಾಲೂಕು ಅಧ್ಯಕ್ಷ ಎ.ಜಿ.ಗಿರೀಶ್ ಮಾತನಾಡಿ, ನುಲಿಯ ಚಂದಯ್ಯ ಅವರು 12ನೇ ಶತಮಾನದಲ್ಲಿ ವಚನಕಾರರಾಗಿ 48 ವಚನಗಳನ್ನು ರಚಿಸಿ ಬಸವಣ್ಣನ ಕಾಲದ ಶರಣರ ನೂರಾರು ವಚನಗಳನ್ನು ರಕ್ಷಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಶರಣರ ತತ್ವಗಳಂತೆ ಬದುಕಬೇಕಿದೆ. ಅವರ ಕಾಯಕದ ಜೀವನ ಇತರರಿಗೆ ಆದರ್ಶವಾಗಬೇಕಿದೆ. ವಚನಲೋಕಕ್ಕೆ ಅವರ ಕೊಡುಗೆ ಅಪಾರವಾದುದು ಎಂದರು.
ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಶತಮಾನಗಳ ಹಿಂದೆ ಮೇಲ್ಜಾತಿಗಳ ಕ್ರೌರ್ಯದ ವಿರುದ್ಧ ಹೋರಾಡಿದ ನಾರಾಯಣಗುರು ಶೂದ್ರರನ್ನು, ದಲಿತರನ್ನು ದೇವಾಲಯಗಳ ಒಳಗೆ ಪ್ರವೇಶ ನೀಡಬೇಕು ಎಂದು ಹೋರಾಡಿದ್ದರು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ನವೀನ್‌ಕುಮಾರ್ ಉಪನ್ಯಾಸ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸಿ.ಎಸ್.ರವಿಕುಮಾರ್, ವೈದ್ಯಾಧಿಕಾರಿ ಡಾ. ಉಮೇಶ್, ಕಲ್ಮುರಡಪ್ಪ, ತಿಪ್ಪೇಶ್, ಕುಳುವ ಸಮಾಜದ ಟಿ.ಮೂರ್ತಿ, ಸಂತೋಷ್, ಸುಂಕಪ್ಪ, ದಾನಪ್ಪ, ರಮೇಶ್, ಪರಮೇಶ್, ರಂಗಪ್ಪ, ಸಿ.ಎಚ್.ಮೂರ್ತಿ, ಕೆ.ಆರ್.ನವೀನ್, ಈಡಿಗ ಸಮಾಜದ ಮೇಲ್‌ರಾಜ್, ರಾಮು, ಶಿವು, ಕಾಂತರಾಜ್, ಬಾಬು, ರಾಜಣ್ಣ, ಚಿನ್ನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net