ಮೇ 8 ರ ಸಿಎಸ್​​ಇಇಟಿ ಪರೀಕ್ಷೆಗೆ ಅಡ್ಮಿಟ್​ ಕಾರ್ಡ್ ಬಿಡುಗಡೆ; ಆಪ್ಟ್​ ಔಟ್​ ಸೌಲಭ್ಯ !

icsi
Published on

ನವದೆಹಲಿ : ಕರೊನಾ ಸನ್ನಿವೇಶದ ಹಿನ್ನೆಲೆಯಲ್ಲಿ ಇನ್ಸ್​ಟಿಟ್ಯೂಟ್ ಆಫ್​ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾ (ಐಸಿಎಸ್​ಐ) ಈ ವರ್ಷದ ಕಂಪೆನಿ ಸೆಕ್ರೆಟರೀಸ್​ ಎಕ್ಸಿಕ್ಯುಟೀವ್ ಎಂಟ್ರೆನ್ಸ್​ ಟೆಸ್ಟ್​ (CSEET 2021) ಅನ್ನು ಆನ್​ಲೈನ್ ಪರೀಕ್ಷೆಯಾಗಿ ನಡೆಸುತ್ತಿದೆ. ಮೇ 8 ರಂದು ನಿಗದಿಯಾಗಿರುವ ಈ ಪ್ರವೇಶ ಪರೀಕ್ಷೆಗೆ ನೋಂದಾಯಿಸಿರುವ ಅಭ್ಯರ್ಥಿಗಳಿಗೆ ಇದೀಗ ಅಡ್ಮಿಟ್​ ಕಾರ್ಡ್​ ಬಿಡುಗಡೆ ಮಾಡಲಾಗಿದೆ.

ಪರೀಕ್ಷೆ ಬರೆಯಲಿರುವ ಅರ್ಜಿದಾರರು ಐಸಿಎಸ್​​ಐನ ಅಧಿಕೃತ ವೆಬ್​ಸೈಟ್ icsi.edu ನಿಂದ ಅಡ್ಮಿಟ್ ಕಾರ್ಡ್​ಅನ್ನು ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ರಿಮೋಟ್-ಪ್ರೊಕ್ಟರ್ಡ್ ಆನ್‌ಲೈನ್ ಪರೀಕ್ಷೆಯಾಗಿದ್ದು, ಅಭ್ಯರ್ಥಿಗಳು ತಮ್ಮ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗಳ ಮೂಲಕ ಮನೆಯಿಂದಲೇ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಆಪ್ಟ್​-ಔಟ್​ ಸೌಲಭ್ಯ : ಈ ಬಾರಿ ಮಾತ್ರ ಅನ್ವಯವಾಗುವಂತೆ, ಆನ್​ಲೈನ್ ಪರೀಕ್ಷೆಯನ್ನು ತೆಗೆದುಕೊಳ್ಳಲು ವೆಬ್​ಕ್ಯಾಮ್​ ಹೊಂದಿದ ಕಂಪ್ಯೂಟರ್​ನ ಮೂಲ ಸೌಕರ್ಯವಿಲ್ಲದ ಮತ್ತು ಕಂಟೈನ್​ಮೆಂಟ್ ಜೋನ್​​ಗಳಲ್ಲಿರುವ ಅರ್ಜಿದಾರರಿಗೆ ಮೇ ಪ್ರವೇಶ ಪರೀಕ್ಷೆಯಿಂದ ಆಪ್ಟ್​ ಔಟ್​ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ಹೀಗೆ ಆಪ್ಟ್ ಔಟ್ ಪಡೆಯುವವರು ನಿಗದಿತ ಫಾರ್ಮಾಟ್​ನಲ್ಲಿ ಘೋಷಣೆ ಸಲ್ಲಿಸಿ ಜುಲೈ 2021 ರಲ್ಲಿ ನಡೆಯುವ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net