ಶ್ರೀ ವಾಲ್ಮೀಕಿ ವಿವಿಯಲ್ಲಿ ಕುಸಿದ ಪ್ರವೇಶಾತಿ * ಹೆಚ್ಚಿನ ಪ್ರವೇಶ ಪಡೆಯಲು ಸಾಮಾನ್ಯ ಪರೀಕ್ಷೆ ರದ್ದು *ಅತಿಥಿ ಉಪನ್ಯಾಸಕರಿಗೆ ತಲೆಬಿಸಿ

raichur
raichur
Published on

 ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉನ್ನತ ಶಿಕ್ಷಣ ದೊರೆಯಬೇಕೆಂದು ದೃಷ್ಠಿಯಿಂದ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತದೆ. ಆದರೆ ವರ್ಷದಿಂದ ವರ್ಷಕ್ಕೆ ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಕ್ಷೀಣಿಸುತ್ತಿದೆ. ಸ್ವತಃ ಉನ್ನತ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದು, ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಮಾಡಬೇಕು ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಬಯಕೆ. ಹೀಗಾಗಿಯೇ ಖಾಸಗಿ ವಿವಿಗಳಲ್ಲಿ ದುಬಾರಿ ಹಣ ಕೊಟ್ಟು ಓದುವುದಕ್ಕೆ ಕಷ್ಟ ಆಗುತ್ತೆ ಎಂಬ ಕಾರಣಕ್ಕಾಗಿ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಸ್ಥಳೀಯವಾಗಿ ದೊರೆಯಲು 2021 ರಲ್ಲಿ ಸರ್ಕಾರ ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯವನ್ನು ಪ್ರಾರಂಭ ಮಾಡಯಿತು. ಆದರೆ ವಿವಿ ಪ್ರಾರಂಭದಿಂದಲು ಒಂದಲ್ಲ. ಒಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದು, ಈದೀಗ ವಿವಿಯಲ್ಲಿ ವಿದ್ಯಾರ್ಥಿಗಳು ಅತಿ ಕಡಿಮೆ ಸಂಖ್ಯೆಯಲ್ಲಿ ಪ್ರವೇಶಾತಿ ಪಡೆದಿರುವುದು ಶೋಚನೀಯ ಸಂಗತಿಯಾಗಿದೆ.

ಕುಸಿದ ಪ್ರವೇಶಾತಿ

ಕಳೆದ ವರ್ಷ ವಿವಿಯ 20 ವಿಭಾಗಗಳ ಸ್ನಾತಕ ಪದವಿ ಕೋರ್ಸ್‌ಗಳಿಗೆ 5470 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.

ಆದರೆ ಪ್ರಸಕ್ತ ಸಾಲಿನಲ್ಲಿ ವಿವಿಯ ಕ್ಯಾಂಪಸ್‌ನಲ್ಲಿ 1080 ಸೀಟುಗಳ ಪೈಕಿ 249 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 831 ಸೀಟುಗಳು ಖಾಲಿ ಇವೆ. ಆದರಂತೆ ರಾಯಚೂರು-ಯಾದಗಿರಿ ವ್ಯಾಪ್ತಿಯ ಒಟ್ಟು 42 ಸ್ನಾತಕೋತ್ತರ ಕಾಲೇಜುಗಳ 3645 ಸೀಟುಗಳ ಪೈಕಿ 612 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು 3073 ಸೀಟುಗಳು ಖಾಲಿ ಇವೆ. ಒಟ್ಟಾರೆಯಾಗಿ ವಿಶ್ವ ವಿದ್ಯಾಲಯ ಹಾಗೂ ಸ್ನಾತಕೋತ್ತರ ಕಾಲೇಜುಗಳು ಸೇರಿ ಒಟ್ಟು 4725 ಸೀಟುಗಳಲ್ಲಿ ಕೇವಲ 861 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ.

ವೇತನ ಪಾವತಿಗೆ ಸಮಸ್ಯೆ

ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರವೇಶ ಆಧಾರದ ಮೇಲೆ ಬೋಧಕ-ಬೋಧಕೇತರ ಸೇರಿದಂತೆ ಕಾಯಂ ನೌಕರರಿಗೆ ಸರ್ಕಾರದಿಂದಲೇ ವೇತನ ಬರುತ್ತದೆ. ಅತಿಥಿ ಉಪನ್ಯಾಸಕರು ಸೇರಿದಂತೆ ಕಾಯಂ ಅಲ್ಲದ ಸಿಬ್ಬಂದಿಗೆ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದಲೇ ವೇತನ ನೀಡಬೇಕು. ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಸಿಬ್ಬಂದಿಗೆ ವೇತನ ನೀಡಲು ವಿವಿ ಕಷ್ಟಪಡುತ್ತಿದ್ದು, ಎರಡು-ಮೂರು ತಿಂಗಳು ವಿಳಂಬವಾಗುತ್ತಿದೆ. ಸಕಾಲಕ್ಕೆ ಸಂಬಳ ಸಿಗದೆ ಅತಿಥಿ ಉಪನ್ಯಾಸಕರು ಜೀವನ ನಿರ್ವಹಣೆ ಮಾಡುವುದೇ ದುಸ್ತರವಾಗಿದೆ.

ಸಾಮಾನ್ಯವಾಗಿ ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳು ದಾಖಲಾಗಬೇಕಾದರೆ ಮೊದಲು ಸಾಮಾನ್ಯ ಪರೀಕ್ಷೆಯನ್ನು (ಎಂಟ್ರೆನ್ಸ್ ಎಕ್ಸಾಂ) ಎದುರಿಸಬೇಕು. ಇದರಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರವೇಶ ಲಭಿಸುತ್ತದೆ. ಯಾವುದೇ ಒಂದು ವಿಷಯಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಬೇಕಾದರೆ ಕನಿಷ್ಠ 100 ಅರ್ಜಿಗಳು ಬರಬೇಕು. ಆದರೆ ಈ ಶೈಕ್ಷಣಿಕ ಸಾಲಿನಲ್ಲಿ 20 ವಿಷಯಗಳಿಗೆ ನಿರೀಕ್ಷಿತ ಅರ್ಜಿ ಬಾರದ ಕಾರಣ ಸಾಮಾನ್ಯ ಪರೀಕ್ಷೆಯನ್ನೆ ವಿವಿ ರದ್ದುಪಡಿಸಿದೆ. ಸಮಾನ್ಯ ಕಾಲೇಜುಗಳಲ್ಲಿ ಪ್ರವೇಶದಂತೆ ವಿವಿ ಪಡೆಯುತ್ತಿದೆ.


ಪ್ರವೇಶಕ್ಕಾಗಿ ಉಪನ್ಯಾಸಕರ ಪರದಾಟ
ಪ್ರತಿ ಬಾರಿ ವಿವಿಯ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ನಾನು, ಮೊದಲು ನೀನು ಮೊದಲು ಎಂಬಂತೆ ಅರ್ಜಿ ಹಾಕುತ್ತಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸದೆ ಇರುವುದರಿಂದ ಅತಿಥಿ ಉಪನ್ಯಾಸಕರು ಪದವಿ ಪೂರೈಸಿದ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಪಡೆದು ಕರೆ ಮಾಡಿ ವಿವಿಯಲ್ಲಿ ಸ್ನಾತಕೋತ್ತರ ಪ್ರವೇಶ ಪಡೆಯುವಂತೆ ಮನವಿ ಮಾಡುತ್ತಿರುವುದು ದುರದೃಷ್ಠಕರ ಸಂಗತ್ತಿಯಾಗಿದೆ.

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಅನೇಕ ಕಡೆ ಪಿಜಿ ಸೆಂಟರ್ ಪ್ರಾರಂಭ ಮಾಡಿರುವುದರಿಂದ ಪ್ರಸಕ್ತ ಸಾಲಿನಲ್ಲಿ ವಿವಿ ಸೇರಿದಂತೆ ಅನೇಕ ಕಾಲೇಜಿನಲ್ಲಿ ಪ್ರವೇಶಾತಿ ಕುಸಿದಿದೆ. ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಪ್ರವೇಶ ಕಡಿಮೆಯಾಗಿದ್ದು, ಪ್ರವೇಶಾತಿಗೆ ಇನ್ನು ಕಾಲಾವಕಾಶವಿದ್ದು, ಜಾಗೃತಿ ಜತೆಗೆ ವಿದ್ಯಾರ್ಥಿಗಳ ಮನಹೊಲಿಸಿ ಉನ್ನತ ಶಿಕ್ಷಣದ ಪ್ರವೇಶ ಪಡೆಯಲಾಗುತ್ತದೆ.

ಡಾ.ಚನ್ನಪ್ಪ ಕುಲಸಚಿವ ಅದಿಕವಿ ವಾಲ್ಮೀಕಿ ವಿವಿ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net