VIDEO: ಬೆಂಗಳೂರಿಗೆ ಬಂದು ಮುಖ್ಯಮಂತ್ರಿಯವರನ್ನು ಭೇಟಿಯಾದ ಕ್ಯಾಟ್​ವಾಕ್​ ಸುಂದರಿ ಯಾರು?!

Adline Castelino Liva Miss Diva Miss Universe India 2020 2 MAR 20
Published on

ಬೆಂಗಳೂರು: ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಆಗಮಿಸಿದ ಸುಂದರಿಯೊಬ್ಬರು ಇಂದು ಎಲ್ಲರ ಗಮನಸೆಳೆದರು. ಮಿಸ್ ಯೂನಿವರ್ಸ್ ಕಿರೀಟಿ ಮುಡಿಗೇರಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಶುಭ ಹಾರೈಸಿದರು.

ಯಾರೀಕೆ ಎಂಬ ಸಹಜ ಕುತೂಹಲ ಅಲ್ಲಿದ್ದವರನ್ನು ಎಲ್ಲರನ್ನೂ ಕಾಡಿತ್ತು. ಎಲ್ಲರ ದೃಷ್ಟಿಯೂ ಆಕೆ ಮೇಲೆಯೇ ಇತ್ತು. ಈಕೆ ಬೇರಾರೂ ಅಲ್ಲ, ಲೀವಾ ಮಿಸ್ ದೀವಾ ಸೌಂದರ್ಯ ಸ್ಪರ್ಧೆ ವಿಜೇತೆ ಉಡುಪಿಯ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ.

ಏನಿದು ಸ್ಪರ್ಧೆ: ಲಿವಾ ಫ್ಲೂಯಿಡ್ ಷ್ಯಾಷನ್​ ಮಾಲೀಕತ್ವದ ಮಿಸ್​ ದಿವಾ 2020ಯ 8ನೇ ಆವೃತ್ತಿಯ ಸ್ಪರ್ಧೆ ಫೆಬ್ರವರಿ 22ರಂದು ಮುಂಬೈನ ಅಂಧೇರಿ ವೆಸ್ಟ್​ನಲ್ಲಿರುವ ಯಶ್​ ರಾಜ್ ಸ್ಟುಡಿಯೋದಲ್ಲಿ ನಡೆದಿತ್ತು. ದೇಶಾದ್ಯಂತ ಆಯ್ದ 20 ಸ್ಪರ್ಧಿಗಳು ಅಂತಿಮ ಸುತ್ತಿನ ಹಣಾಹಣಿಯಲ್ಲಿ ಭಾಗವಹಿಸಿದ್ದರು. ಕೊನೆಗೆ ಲೀವಾ ಮಿಸ್ ದಿವಾದ ಮಿಸ್​ ಯೂನಿವರ್ಸ್ ಇಂಡಿಯಾ 2020ರ ಕಿರೀಟವನ್ನು ಉಡುಪಿಯ ಅಡ್ಲೀನ್ ಕ್ಯಾಸ್ಟಲಿನೊ ಮುಡಿಗೇರಿಸಿಕೊಂಡರು. 2019ರ ಮಿಸ್​ ಯೂನಿವರ್ಸ್ ಇಂಡಿಯಾ ವರ್ತಿಕಾ ಸಿಂಗ್ ಅವರು ಬೆಳ್ಳಿ ಕಿರೀಟವನ್ನು ಅಡ್ಲೀನ್​ಗೆ ತೊಡಿಸಿದರು. ಇದೇ ಅಡ್ಲೀನ್ ಕ್ಯಾಸ್ಟಲಿನೋ ಮಿಸ್ ಯೂನಿವರ್ಸ್ 2020ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net