

ತಿರುಪತಿ: ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಟಿಸಿರುವ ರಾಮಾಯಣ ಕಥೆಯಾಧಾರಿತ ಆದಿಪುರುಷ್ ಚಿತ್ರ ಜೂನ್ 16ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಆದಿಪುರುಷ್ ಚಿತ್ರತಂಡವು ಅಂತಿಮ ಟ್ರೇಲರ್ನ್ನು ಬಿಡುಗಡೆ ಮಾಡಿದೆ.
ಮಂಗಳವಾರ ತಿರುಪತಿಯಲ್ಲಿ ನಡೆದ ಅದ್ಧೂರಿ ಪ್ರೀ-ರಿಲೀಸ್ ಸಮಾರಂಭದಲ್ಲಿ ಈ ಟ್ರೇಲರ್ನ್ನು ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಚಿತ್ರರಂಗದ ನಟ-ನಟಿ ಹಾಗೂ ಅನೇಕ ಗಣ್ಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಆದಿಪುರುಷ್ ಚಿತ್ರದ ಅಂತಿಮ ಟ್ರೈಲರ್ನಲ್ಲಿ ಏನಿದೆ?
2 ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೇಲರ್ನಲ್ಲಿ ರಾಮಾಯಣದ ಕಥಾಹಂದರವನ್ನು ತೋರಿಸಲಾಗಿದೆ. ರಾವಣನು ಸೀತೆಯನ್ನು ಅಪಹರಿಸಿದ ನಂತರದಲ್ಲಾಗುವ ಘಟನೆಗಳ ಚಿತ್ರಣದ ಜತೆಗೆ ಯುದ್ಧಭೂಮಿಯಲ್ಲಿ ಪ್ರಭಾಸ್, ವಾನರ ಸೈನ್ಯ ಮತ್ತು ಯುದ್ಧದ ಅನೇಕ ದೃಶ್ಯಗಳನ್ನು ಈ ಟ್ರೇಲರ್ ಒಳಗೊಂಡಿವೆ.
ಹಿಂದಿನ ಟ್ರೇಲರ್ಗಳು ಮತ್ತು ಟೀಸರ್ಗಳಿಗೆ ಹೋಲಿಸಿದರೆ ಈ ಟ್ರೇಲರ್ನ ಮೊದಲಾರ್ಧವು ಉತ್ತಮವಾದ ದೃಶ್ಯಗಳನ್ನು ಹೊಂದಿದೆ. ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಟ್ರೇಲರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಭಾರತದ 5 ವಿವಿಧ ಭಾಷೆಗಳಲ್ಲಿ ಆದಿಪುರುಷ್ ಚಿತ್ರ ಬಿಡುಗಡೆಯಾಗಲಿದೆ.(ಏಜೆನ್ಸೀಸ್)