ಮಡಿವಾಳ ಸಮಾಜಕ್ಕೆ ಸಾಕಷ್ಟು ಅನುದಾನ

nanjappa
ಸಿ.ನಂಜಪ್ಪ, ಮಡಿವಾಳ ಸಂಘದ ರಾಜ್ಯಾಧ್ಯಕ್ಷ
Published on

ಶಿವಮೊಗ್ಗ: ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಮಡಿವಾಳ ಸಮಾಜಕ್ಕೆ ಅನುದಾನ ನೀಡಲಾಗಿದ್ದು, ಮಾಚಿದೇವ ಜಯಂತಿ ಆಚರಣೆ ಮಾಡಲಾಗುತ್ತಿದೆ. ಸಮಾಜದ ಸಮುದಾಯ ಭವನಗಳಿಂದ ಕಾಂಗ್ರೆಸ್ ಸರ್ಕಾರ 6.5 ಕೋಟಿ ರೂ. ನೀಡಿದೆ ಎಂದು ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಸಮಾಜಕ್ಕೆ ಕಾಂಗ್ರೆಸ್ ಸಾಕಷ್ಟು ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಮಡಿವಾಳ ಸಮಾಜವನ್ನು ಎಸ್ಸಿ ಜನಾಂಗಕ್ಕೆ ಸೇರಿಸುವ ಭರವಸೆ ದೊರೆತಿದೆ. ಸಮಾಜದ ವೃತ್ತಿದಾರರಿಗೆ ಇಸ್ತ್ರಿ ಅಂಗಡಿಯ ವಿದ್ಯುತ್ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡುವುದಾಗಿಯೂ ಸಿಎಂ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಕಳೆದ ಅವಧಿಯಲ್ಲಿ ಸಮಾಜದ ಪ್ರಮುಖರಿಗೆ ನಿಗಮ ಮಂಡಳಿಯ ಜತೆಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲಾಗಿತ್ತು. ಮಾಧ್ಯಮ ಅಕಾಡೆಮಿ, ಮದ್ಯಪಾನ ಸಂಯಮ ಮಂಡಳಿ, ಕೆಪಿಎಸ್‌ಸಿ, ಬೆಂಗಳೂರು ವಿವಿಯಲ್ಲಿ ಸಮಾಜದವರಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ರಾಜಣ್ಣ, ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೆ.ಪ್ರಮೋದ್, ಪ್ರಮುಖರಾದ ಹಿರಣ್ಣಯ್ಯ, ಬಾಲಾಜಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net