ಸಿಎಂಗೆ ಹೆಚ್ಚುವರಿ ಅಧಿಕಾರ, ಸಂಪುಟದಲ್ಲಿ ನಿರ್ಧಾರ

VidhanaSoudha
Published on

ಬೆಂಗಳೂರು: ಕರ್ನಾಟಕ ಸರ್ಕಾರದ ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳಿಗಳ ತಿದ್ದುಪಡಿ ತರಲು ಶುಕ್ರವಾರ ನಡೆದ ಸಂಪುಟ ಸಭೆ ನಿರ್ಧರಿಸಿದೆ.

‘ಅಧ್ಯಾದೇಶಗಳು ಒಳಗೊಂಡಂತೆ ಶಾಸನಗಳ ಪ್ರಸ್ತಾವಗಳು, ಆದರೆ ಪೂರ್ಣವಾಗಿ ಔಪಚಾರಿಕ ಸ್ವರೂಪದ ಅಥವಾ ಅತೀ ಕಡಿಮೆ ಪ್ರಾಮುಖ್ಯತೆ ಹೊಂದಿರುವ ವಿಷಯಗಳೆಂದು ಮುಖ್ಯಮಂತ್ರಿಯವರು ಅಭಿಪ್ರಾಯ ಪಡುವ ಪ್ರಸ್ತಾವಗಳನ್ನು ಹೊರತುಪಡಿಸಿ’ ಎಂಬ ನಿಯಮವನ್ನು ತಿದ್ದುಪಡಿ ಮಾಡಿ ‘ತುರ್ತು ಸಂದರ್ಭಗಳಲ್ಲಿ ರಾಜ್ಯ ಸಚಿವ ಸಂಪುಟದ ಪೂರ್ವಾನುಮೋದನೆ ಇಲ್ಲದೇ ರಾಜ್ಯ ವಿಧಾನ ಮಂಡಲದಲ್ಲಿ ವಿಧೇಯಕಗಳನ್ನು ಮಂಡಿಸಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡುತ್ತದೆ’ ಇಂತಹ ಪ್ರಸ್ತಾವನೆಗಳಿಗೆ ಘಟನೋತ್ತರ ಮಂಜೂರಾತಿ ಪಡೆಯಲು ಈ ತಿದ್ದುಪಡಿಯಲ್ಲಿ ಅವಕಾಶ ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net