

|ಕೀರ್ತಿನಾರಾಯಣ ಸಿ. ಬೆಂಗಳೂರು
ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್ಎಸ್ಆರ್ಪಿ) ನಂಬರ್ ಅಳವಡಿಸುವಲ್ಲಿ ನಡೆಯುತ್ತಿರುವ ಗೋಲ್ಮಾಲ್ಗೆ ಕೊನೆಗೂ ಸರ್ಕಾರವೇ ಬ್ರೇಕ್ ಹಾಕಿದೆ. 2019ರ ಏ.1ಕ್ಕಿಂತ ಮೊದಲು ರಸ್ತೆಗಿಳಿದಿರುವ ಹಳೇ ವಾಹನಗಳ ನಂಬರ್ ಪ್ಲೇಟ್ಗಳನ್ನು ಎಚ್ಎಸ್ಆರ್ಪಿ ಫಲಕಗಳಾಗಿ ಪರಿವರ್ತಿಸಲು ತೀರ್ವನಿಸಿದೆ. ಜತೆಗೆ ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ. ಇದರೊಂದಿಗೆ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯವೋ ಅಲ್ಲವೋ ಎಂಬ ಗೊಂದಲಕ್ಕೂ ತೆರೆಬಿದ್ದಂತಾಗಿದೆ. ಹೊಸ ವ್ಯವಸ್ಥೆ ಜಾರಿ ವಿಚಾರದ ಮಾಹಿತಿಯನ್ನು ಸರ್ಕಾರ ಮಂಗಳವಾರ (ಮಾ.29) ಹೈಕೋರ್ಟ್ಗೂ ನೀಡಿದೆ.
ಸದ್ಯ 2019 ಏ.1ರ ನಂತರ ಖರೀದಿಸಿದ ವಾಹನಗಳಿಗೆ ಮಾತ್ರವೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ ನಿಯಮ ಜಾರಿಯಲ್ಲಿದೆ. ವಾಹನ ಉತ್ಪಾದಕರೇ ನಂಬರ್ ಪ್ಲೇಟ್ಗಳನ್ನು ಪೂರೈಕೆ ಮಾಡಬೇಕು ಎಂದು ಜವಾಬ್ದಾರಿ ವಹಿಸಲಾಗಿದೆ. ಆದರೆ, ಹಳೇ ವಾಹನಗಳಿಗೆ ಎಚ್ಎಸ್ಆರ್ಪಿ ಕಡ್ಡಾಯವಲ್ಲದಿದ್ದರೂ ಕೆಲವರು ಇದನ್ನೇ ದುರ್ಬಳಕೆ ಮಾಡಿಕೊಂಡು ನಕಲಿ ನಂಬರ್ ಪ್ಲೇಟ್ ಹಾಗೂ ಹಾಲೋಗ್ರಾಂ ಸ್ಟಿಕ್ಕರ್ಗಳನ್ನು ಅಳವಡಿಸಿ, ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ದಂಧೆ ಹುಟ್ಟಿಕೊಂಡಿತ್ತು.
ಹಳೇ ವಾಹನಗಳ ಮಾಲೀಕರಿಗೆ ಹೊರೆಯಾಗದಂತೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದ್ದು, ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ. ಅಲ್ಲದೆ, ರಾಜ್ಯಾದ್ಯಂತ ನಂಬರ್ ಪ್ಲೇಟ್ಗಳನ್ನು ಪೂರೈಸುವ ಜವಾಬ್ದಾರಿಯನ್ನು 5 ರಿಂದ 7 ಸಂಸ್ಥೆಗಳನ್ನು ಒಟ್ಟುಗೂಡಿಸಿ ಜವಾಬ್ದಾರಿ ನೀಡಲು ನಿರ್ಧರಿಸಿದೆ. ಹೊಸ ವ್ಯವಸ್ಥೆಯಿಂದ ನಂಬರ್ ಪ್ಲೇಟ್ ದಂಧೆ ನಿಯಂತ್ರಣಕ್ಕೆ ಬರಲಿದೆ.
ನಿಯಮ ಉಲ್ಲಂಘನೆ: ಹೊಸ ವಾಹನ ಖರೀದಿಯಾದ 6 ಗಂಟೆಯೊಳಗೆ ಎಚ್ಎಸ್ಆರ್ಪಿ ಪ್ಲೇಟ್ ಅಳವಡಿಸಬೇಕೆಂಬ ನಿಯಮವಿದೆ.
1000 ಕೋಟಿ ರೂ.ವ್ಯವಹಾರ: ರಾಜ್ಯದಲ್ಲಿ ಒಂದೂವರೆ ಕೋಟಿ ಹಳೇ ವಾಹನಗಳಿರಬಹುದೆಂಬ ಅಂದಾಜಿದೆ. ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸಿದರೆ ಅಂದಾಜು 600 ರಿಂದ 1000 ಕೋಟಿ ರೂ. ವಹಿವಾಟು ನಡೆಯಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಂಬರ್ ಪ್ಲೇಟ್ನಲ್ಲಿ ಏನೇನಿರುತ್ತೆ?
2021ರ ಟೆಂಡರ್ ರದ್ದು
ಹಳೇ ವಾಹನಗಳಿಗೆ ಎಚ್ಎಸ್ಆರ್ಪಿ ಪ್ಲೇಟ್ ಅಳವಡಿಸಲು 2021ರ ಅಕ್ಟೋಬರ್ನಲ್ಲಿ ಸಾರಿಗೆ ಇಲಾಖೆ ಇ- ಟೆಂಡರ್ ಕರೆದಿತ್ತು. ಕೆಲ ಷರತ್ತು ವಿಧಿಸಿದ್ದನ್ನು ಪ್ರಶ್ನಿಸಿ, ನಂಬರ್ ಪ್ಲೇಟ್ ಮಾರಾಟಗಾರ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಆದರೀಗ ಇ-ಟೆಂಡರ್ ರದ್ದುಪಡಿಸಲಾಗಿದೆ.
ಅನುಕೂಲವೇನು?
ಸಿಎಂ ಸಭೆ ನಿರ್ಧಾರ
ಆದರೆ, ಪ್ಲೇಟ್ ಪೂರೈಕೆದಾರರ ವಿಳಂಬ ಹಾಗೂ ಶೋರೂಂ ಡೀಲರ್ಗಳ ಉದಾಸೀನ ಧೋರಣೆಯಿಂದಾಗಿ ಹಲವು ತಿಂಗಳು ಕಳೆದರೂ ನಂಬರ್ ಅಳವಡಿಕೆ ಮಾಡುತ್ತಿಲ್ಲ. ಹೀಗಾಗಿ ಪೊಲೀಸರಿಂದ ವಾಹನ ತಪಾಸಣೆ ವೇಳೆ ಮಾಲೀಕರಿಗೆ ತೊಂದರೆಯಾಗುತ್ತಿದೆ.
ಪ್ರಕ್ರಿಯೆ: