Prabhas ಸಿನಿಮಾಗೆ ನೋ ಹೇಳಿದ ನಟಿ! ಕಾರಣ ತಿಳಿದರೆ ಶಾಕ್ ಆಗುತ್ತೀರಿ..

mrunal
Published on

ಹೈದ್ರಾಬಾದ್​​: ನಟ ಪ್ರಭಾಸ್​​ಗೆ ( Prabhas ) ನಾಯಕಿಯಾಗಿ ನಟಿಸಲು ಬಾಲಿವುಡ್ ನಟಿಯರು ಕೂಡ ಪೈಪೋಟಿ ನಡೆಸುತ್ತಿದ್ದಾರೆ. ಏಕೆಂದರೆ ಪ್ರಭಾಸ್ ಅವರನ್ನು ಭೇಟಿಯಾದಾಗ ಅವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿತು. ಆದರೆ ಇದೀಗ ಪ್ರಭಾಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಖ್ಯಾತ ನಟಿಯೊಬ್ಬರು ತಿರಸ್ಕರಿಸಿದ್ದಾರೆ.

ಬಾಲಿವುಡ್ ಸ್ಟಾರ್ ನಟಿಯರಾದ ಶ್ರದ್ಧಾ ಕಪೂರ್, ಕೃತಿ ಸನೋನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಈಗಾಗಲೇ ಪ್ರಭಾಸ್ ಅವರ ಚಿತ್ರಗಳಲ್ಲಿ ನಟಿಸಿದ್ದಾರೆ.  ಆದರೆ  ಈ ನಟಿ ಸಿನಿಮಾ ಮಾಡಲ್ಲ ಪ್ರಭಾಸ್​ ಜತೆ ನಟಿಸಲ್ಲ ಎನ್ನಲು ಕಾರಣ  ಕಾರಣ ಪ್ರಭಾಸ್ ಅಲ್ಲ ಆ ಸಿನಿಮಾದ ನಿರ್ದೇಶಕ.

ಪ್ರಭಾಸ್ ‘ಸ್ಪಿರಿಟ್’ ಸಿನಿಮಾದಲ್ಲಿ ಪಾತ್ರಗಳಿಗೆ ಹಲವು ನಾಯಕಿಯರ ಹೆಸರುಗಳು ಕೇಳಿ ಬಂದಿದ್ದವು. ನಯನಾ ತಾರಾ, ತ್ರಿಷಾ.. ಹೀಗೆ ಹಲವು ಹೆಸರುಗಳು ಕೇಳಿ ಬಂದವು. ಸ್ಪಿರಿಟ್ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತು ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಇದೀಗ ಈ ಆಫರ್ ಅನ್ನು ಬಾಲಿವುಡ್ ಬೆಡಗಿ ತಿರಸ್ಕರಿಸಿದ್ದಾರೆ.

ಸದ್ಯ ಪ್ರಭಾಸ್ ‘ಸ್ಪಿರಿಟ್’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 'ಅರ್ಜುನ್ ರೆಡ್ಡಿ' ಮತ್ತು ' ಅನಿಮಲ್​' ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂದೀಪ್ ಅವರ ಚಿತ್ರಗಳು ಬ್ಲಾಕ್ ಬಸ್ಟರ್ ಆಗಿದ್ದರೂ, ಅವರ ನಿರ್ದೇಶನದ ಶೈಲಿಯನ್ನು ಈ ಹಿಂದೆ ಟೀಕಿಸಲಾಗಿದೆ. ಸಂದೀಪ್ ಅವರ ಸಿನಿಮಾಗಳಲ್ಲಿ  ರೊಮ್ಯಾನ್ಸ್​ ಜಾಸ್ತಿ ಇದೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ, ಮಹಿಳೆಯರನ್ನು ಗುಲಾಮರಂತೆ ತೋರಿಸಿ ಕೀಳಾಗಿ ಕಾಣುತ್ತಾರೆ ಎಂಬ ಟೀಕೆಗಳೂ ಕೇಳಿ ಬಂದವು. ಅವರ ಅನಿಮಲ್ ಚಿತ್ರ 900 ಕೋಟಿಗೂ ಹೆಚ್ಚು ಗಳಿಸಿದ್ದರೂ, ಅನೇಕ ಸೆಲೆಬ್ರಿಟಿಗಳು ಈ ಚಿತ್ರವನ್ನು  ಟೀಕಿಸಿದರು. ಈ ಕಾರಣಗಳಿಂದಲೇ ಇದೀಗ ಮೃಣಾಲ್ ಠಾಕೂರ್ ಸಂದೀಪ್ ರೆಡ್ಡಿ ಅವರ ವಂಗ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net