

ಸಿನಿಮಾ ಜಗತ್ತಿನಲ್ಲಿ ಹಲವಾರು ನಟಿಯರು ತಮ್ಮ ಅಸಾಧಾರಣ ಪ್ರತಿಭೆ ಹಾಗೂ ಆಕರ್ಷಕ ವ್ಯಕ್ತಿತ್ವದಿಂದಲೇ ವೀಕ್ಷಕರ ಗಮನಸೆಳೆಯುವಲ್ಲಿ ಇಂದು ಮುಂಚೂಣಿಯಲ್ಲಿದ್ದಾರೆ. ಅದು ಸಿನಿಮಾನೇ ಆಗಿರಲಿ ಅಥವಾ ಧಾರವಾಹಿಯೇ ಇರಲಿ ತಮ್ಮ ಪಾತ್ರಗಳಿಂದಲೇ ನೋಡುಗರ ಅಪಾರ ಪ್ರೀತಿ, ಮೆಚ್ಚುಗೆ ಪಾತ್ರರಾಗಿರುವ ಈ ನಟಿಮಣಿಯರು ಸೋಷಿಯಲ್ ಮೀಡಿಯಾದಲ್ಲೂ ಸಹ ಹೆಚ್ಚಿನ ಜನಮನ್ನಣೆ ಗಳಿಸಿದ್ದಾರೆ.
ಪಾಕಿಸ್ತಾನಿ ನಟಿಯರು ಲಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ ಇಂದು ಜನಪ್ರಿಯತೆಯ ಭಾಗವಾಗಿದ್ದಾರೆ. ಈ ಪ್ರಮುಖ ಹೀರೋಯಿನ್ಗಳು ಅಪಾರವಾದ ಸ್ಟಾರ್‌ಡಮ್ ಸಾಧಿಸಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೆ ಭಾರತ ಮತ್ತು ಇತರೆ ದೇಶಗಳು ಸೇರಿದಂತೆ ಗಡಿ ಮೀರಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದ್ಭುತ ನಟನೆ, ಆಕರ್ಷಕ ಸೌಂದರ್ಯ ಮತ್ತು ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿರುವ ನಟಿಮಣಿಯರು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿ, ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಪಾಕಿಸ್ತಾನದ ಮನರಂಜನಾ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಅತ್ಯಂತ ಜನಪ್ರಿಯ ಹಾಗೂ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದರೆ ಅದು ಮೆಹ್ವಿಶ್ ಹಯಾತ್. ಇತ್ತೀಚಿನ ದಿನಗಳಲ್ಲಿ ಮೆಹ್ವಿಶ್ ಹಯಾತ್, ಅಧಿಕ ಸಂಭಾವನೆ ಪಡೆಯುವ ಪಾಕಿಸ್ತಾನಿ ನಟಿಯಾಗಿ ಹೊರಹೊಮ್ಮಿದ್ದಾರೆ. ‘ಪಂಜಾಬ್ ನಹಿ ಜೌಂಗಿ’, ‘ದಿಲ್ಲಗಿ’, ‘ಮಿಸ್ ಮಾರ್ವೆಲ್’ ಮತ್ತು ‘ಲಂಡನ್ ನಹಿ ಜೌಂಗಾ’ ಚಿತ್ರಗಳಲ್ಲಿನ ಅಭಿನಯಕ್ಕೆ ನೋಡುಗರಿಂದ ವ್ಯಾಪಕ ಮೆಚ್ಚುಗೆ ಗಳಿಸಿದ್ದಾರೆ. ವರದಿಯ ಪ್ರಕಾರ, ಒಂದು ಸಂಚಿಕೆಗೆ ಈಕೆ ಪಡೆಯುವ ಸಂಭಾವನೆ ಬರೋಬ್ಬರಿ 8 ಲಕ್ಷ ರೂ. ಇದೆ ಎಂದು ವರದಿಯಾಗಿದೆ.
ಮೆಹ್ವಿಶ್ ಬಳಿಕ ಮಹಿರಾ ಖಾನ್, ಸಬಾ ಕಮರ್ ಮತ್ತು ಅಯೇಜಾ ಖಾನ್ ಪ್ರತಿ ಸಂಚಿಕೆಗೆ 3ರಿಂದ 6.5 ಲಕ್ಷ ರೂ. ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎನ್ನಲಾಗಿದೆ,(ಏಜೆನ್ಸೀಸ್).