

Eating Habits : ಊಟಕ್ಕೆ ಕುಳಿತಾಗ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಅಭ್ಯಾಸಗಳು ಇರುತ್ತವೆ. ಕೆಲವರು ಊಟದ ಮಧ್ಯೆ ನೀರು ಕುಡಿದರೆ, ಕೆಲವರು ಊಟದ ನಂತರ ಸ್ವಲ್ಪ ಸಮಯ ಬಿಟ್ಟು ನೀರು ಕುಡಿಯುತ್ತಾರೆ. ಅಲ್ಲದೆ, ಕೆಲವರು ಊಟದ ಬಳಿಕ ಕೈ ತೊಳೆದು, ಒದರುವುದನ್ನು ನೋಡಿರುತ್ತೀರಿ. ವಾಸ್ತುಶಾಸ್ತ್ರದ ಪ್ರಕಾರ ಊಟ ಮಾಡಿದ ನಂತರ ಏನು ಮಾಡಬಾರದೆಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಿಂದು ಧರ್ಮವು ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ನಾವು ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವ ತನಕ ಮಾಡಬೇಕಾದ ಎಲ್ಲವನ್ನೂ ಹಿಂದು ಧರ್ಮಗ್ರಂಥಗಳು ಮತ್ತು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಧಾರ್ಮಿಕ ಗ್ರಂಥಗಳು ಜಗತ್ತಿಗೆ ಅನೇಕ ಬೋಧನೆಗಳನ್ನು ನೀಡಿವೆ. ಈ ಗ್ರಂಥ ಅಥವಾ ಶಾಸ್ತ್ರಗಳಲ್ಲಿ ಇರುವ ನಿಯಮಗಳನ್ನು ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ಸಮಯದವರೆಗೆ ಅನುಸರಿಸಬೇಕಿದೆ.
ಆದರೆ, ಕೆಲವರು ಆ ನಿಯಮಗಳನ್ನು ಪಾಲಿಸುವುದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ, ನಾವು ಪ್ರತಿದಿನವೂ ತಿಳಿಯದೆ ನಿರ್ಲಕ್ಷಿಸುವ ಅನೇಕ ಆಹಾರ-ಸಂಬಂಧಿತ ನಿಯಮಗಳಿವೆ. ಇದರಿಂದ ಅನೇಕರು ಬಡತನಕ್ಕೆ ತುತ್ತಾಗುತ್ತಿದ್ದಾರೆ ಎನ್ನುತ್ತಾರೆ ಹಿಂದು ಧಾರ್ಮಿಕ ಪಂಡಿತರು.
ನಮ್ಮಲ್ಲಿ ಅನೇಕರು ಊಟ ಮಾಡಿದ ನಂತರ ಅದೇ ತಟ್ಟೆಯಲ್ಲಿ ಕೈ ತೊಳೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ನಾವು ಈ ತಪ್ಪನ್ನು ಮಾಡಿದರೆ ಅದು ಆಹಾರದ ನಿಯಮಗಳನ್ನು ಮುರಿದಂತೆ ಮತ್ತು ನಾವು ತಿನ್ನುವ ಆಹಾರವನ್ನು ಅವಮಾನಿಸಿದಂತೆ. ಹಾಗಾಗಿ ಊಟ ಮಾಡಿದ ನಂತರ ಹೀಗೆ ಮಾಡುವ ಬದಲು ಬೇರೆ ಕಡೆ ಕೈ ತೊಳೆಯಬೇಕು ಎನ್ನುತ್ತಾರೆ ವಿದ್ವಾಂಸರು.
ಇನ್ನು ತಿಂದ ನಂತರ ನಿಮ್ಮ ಕೈಗಳನ್ನು ತೊಳೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಅನೇಕ ಜನರು ಇದನ್ನು ಮಾಡದೆ ತಮ್ಮ ಕೈಗಳನ್ನು ಒದರುತ್ತಾರೆ. ಇದರಿಂದ ಕೈಯಲ್ಲಿರುವ ನೀರು ಬೇರೆಯವರ ಮೇಲೆ ಬೀಳುತ್ತದೆ. ಹೀಗೆ ಮಾಡಿದರೆ ಪಾಪ ನಿಮ್ಮನ್ನು ಸುತ್ತಿಕೊಳ್ಳುತ್ತದೆ ಎಂದೂ ಹೇಳುತ್ತಾರೆ.
ಅನ್ನಪೂರ್ಣೆಯ ಕೃಪೆಯಿಂದ ಅನ್ನ ಸಿಗುತ್ತದೆ ಎಂದು ಹಿಂದು ಧರ್ಮ ಹೇಳುತ್ತದೆ. ತಿನ್ನುವ ಮೊದಲು ಅಂತಹ ದೇವತೆಯನ್ನು ಸ್ಮರಿಸಿ. ಅಲ್ಲದೆ, ತಿಂದ ನಂತರ ಪ್ಲೇಟ್ ಒಣಗಲು ಬಿಡದೆ ತಕ್ಷಣವೇ ತೊಳೆಯಬೇಕು. ತಿಂದ ನಂತರ, ಅನೇಕ ಜನರು ತಮ್ಮ ಹಲ್ಲುಗಳ ನಡುವೆ ಅಂಟಿಕೊಂಡಿರುವ ಆಹಾರ ತುಂಡುಗಳನ್ನು ತೆಗೆದುಹಾಕಲು ಸೂಜಿ ಅಥವಾ ಹಲ್ಲಿನ ಕಡ್ಡಿಯನ್ನು ಬಳಸುತ್ತಾರೆ. ಹಾಗೆ ಮಾಡುವುದರಿಂದ ಬಡತನ ಬರುತ್ತದೆ. ಬಾಯಿಗೆ ತೊಂದರೆಯಾದಾಗ ನೀರನ್ನು ಮುಕ್ಕಳಿಸಿ ಉಗಿಯಬೇಕು.
ಕೆಲವರು ಒಂದು ಬದಿಗೆ ಒರಗಿಕೊಂಡು ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ ಬರುತ್ತದೆ ಎನ್ನುತ್ತಾರೆ ವಿದ್ವಾಂಸರು. ಅಲ್ಲದೆ, ತಿಂದ ನಂತರ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತದೆ ವಿಜ್ಞಾನ. ಆದ್ದರಿಂದ ಈ ತಪ್ಪುಗಳನ್ನು ಮಾಡಬೇಡಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.