Vaani Kapoor Accident ; ಪೊಲೀಸ್ ವಾಹನಕ್ಕೆ ನಟಿ ಸ್ಕೂಟಿ ಡಿಕ್ಕಿ! ಹೀರೋಯಿನ್​ ಸ್ಥಿತಿ ಹೇಗಿದೆ ಗೊತ್ತಾ?

Vaani Kapoor
Published on

ಮುಂಬೈ: ( Vaani Kapoor Accident) ಬಾಲಿವುಡ್ ನಾಯಕಿ ವಾಣಿ ಕಪೂರ್ ಸ್ಕೂಟಿ ಅಪಘಾತಕ್ಕೀಡಾಗಿದೆ. ಭಾನುವಾರ ಬೆಳಗ್ಗೆ ಜೈಪುರದಲ್ಲಿ ಸಿನಿಮಾ ಶೂಟಿಂಗ್ ವೇಳೆ ಅಪಘಾತಕ್ಕೀಡಾಗಿದ್ದಾಳೆ ಎಂದು ವರದಿಯಾಗಿದೆ.

ಜೈಪುರದ ಬಾಪು ಬಜಾರ್‌ನಲ್ಲಿ ವಾಣಿ ಕಪೂರ್ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು  ಚಿತ್ರೀಕರಿಸುತ್ತಿದೆ. ಆ ವೇಳೆ ನಾಯಕಿ ಚಲಾಯಿಸುತ್ತಿದ್ದ ಸ್ಕೂಟರ್ ಸಮೀಪ ನಿಂತಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ವರದಿಗಳ ಪ್ರಕಾರ, ಸಿನಿಮಾದ ಒಂದು ಸೀನ್ ನಲ್ಲಿ ಸ್ಕೂಟಿ ರೈಡ್ ಸೀನ್ ಇದೆ. ಹಾಗಾಗಿ ಶೂಟಿಂಗ್ ಗೂ ಮುನ್ನ ನಾಯಕಿ ಸ್ಕೂಟಿ ರೈಡ್ ಅಭ್ಯಾಸ ಮಾಡುತ್ತಾರೆ. ಅದೇ ವೇಳೆ ಆಕೆ ಚಲಾಯಿಸುತ್ತಿದ್ದ ಸ್ಕೂಟಿ ಅಲ್ಲಿ ನಿಂತಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತವಾದ ತಕ್ಷಣ ಚಿತ್ರತಂಡ ಘಟನಾ ಸ್ಥಳಕ್ಕೆ ಆಗಮಿಸಿ ನಟಿಯನ್ನು ರಕ್ಷಿಸಿದೆ. ಅಪಘಾತದಲ್ಲಿ ವಾಣಿಗೆ ಯಾವುದೇ ಗಾಯಗಳಾಗಿಲ್ಲ. ವಾಣಿ ಕಪೂರ್ ಸದ್ಯ ‘ಅಬೀರ್ ಗುಲಾಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪಾಕಿಸ್ತಾನಿ ನಟ ಫವಾದ್ ಖಾನ್ ಕೂಡ ನಟಿಸಿದ್ದಾರೆ.

ಈ ಚಿತ್ರದ ಶೂಟಿಂಗ್‌ಗಾಗಿ ಫವಾದ್ ಶೀಘ್ರದಲ್ಲೇ ಜೈಪುರಕ್ಕೆ ಬರಲಿದ್ದಾರೆ. ವರದಿಗಳ ಪ್ರಕಾರ, ನವೆಂಬರ್ 18 ರಂದು ಜೈಪುರದ ಶಿವ ವಿಲಾಸ್ ಹೋಟೆಲ್‌ನಲ್ಲಿ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net