

ಬೆಂಗಳೂರು: ನಟ ಬಾಲಕೃಷ್ಣ ಅವರ ಇತ್ತೀಚಿನ ಚಿತ್ರ NBK 109 ಶೂಟಿಂಗ್ ನಲ್ಲಿ ಅಪಘಾತ ಸಂಭವಿಸಿದೆ. ಬಾಲಿವುಡ್‌ನ ನಟಿ ಊರ್ವಶಿ ರೌಟೇಲಾ ಅವರು ದೃಶ್ಯದ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಊರ್ವಶಿ ಅವರ ಕಾಲು ಮುರಿತವಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ವರದಿ ಆಗಿದೆ.
ಬಾಲಯ್ಯ ಅವರ ಸಿನಿಮಾದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಆ್ಯಕ್ಷನ್ ದೃಶ್ಯ ಮಾಡುವಾಗ ಅವರ ಕಾಲಿಗೆ ಪೆಟ್ಟಾಗಿದೆ. ಕಾಲು ಮುರಿದಿರುವುದರಿಂದ ಅವರಿಗೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಯ್ಯ ಅವರು ಇಷ್ಟು ದಿನ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದರು. ಅವರು ಶಾಸಕ ಕೂಡ ಆಗಿದ್ದಾರೆ. ಬಾಲಯ್ಯ ಅವರು ‘NBK 109’ ಚಿತ್ರದ ಶೂಟಿಂಗ್ನ ಇನ್ನೂ ಆರಂಭ ಮಾಡಿಲ್ಲ ಎಂದು ಹೇಳಿದ್ದರು. ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕ ಅವರು ಶೂಟಿಂಗ್ ಆರಂಭಿಸಿದ್ದಾರೆ.
ಊರ್ವಶಿ ರೌಟೇಲಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆ್ಯಕ್ಷನ್ ಸಿನಿಮಾ ‘ಬಾಪ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ಮಿತುನ್ ಚಕ್ರವರ್ತಿ, ಸಂಜಯ್ ದತ್ ನಟಿಸುತ್ತಿದ್ದಾರೆ. ‘ಇನ್ಸ್ಪೆಕ್ಟರ್ ಅವಿನಾಶ್ 2’ ಚಿತ್ರದಲ್ಲಿ ರಣದೀಪ್ ಹೂಡಾ ಜೊತೆ ತೆರೆ ಹಂಚಿಕೊಂಡಿದ್ದಾರೆ.