ನಟಿ ಉರ್ಫಿ ಜಾವೇದ್ ಇನ್‌ಸ್ಟಾಗ್ರಾಮ್ ಖಾತೆ ಸ್ಥಗಿತ!

Untitled design (10)
Published on

ಮುಂಬೈ: ಬಾಲಿವುಡ್​ ನಟಿ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆದ ಉರ್ಫಿ ಜಾವೇದ್ ಇನ್​ಸ್ಟಾಗ್ರಾಮ್​ ಖಾತೆ ಇದೀಗ ಅಮಾನತುಗೊಂಡಿದ್ದು, ಸ್ವತಃ ಇನ್​ಸ್ಟಾಗ್ರಾಮ್​ ಟೀಮ್​ ಅವರ ಅಕೌಂಟ್​ ಅನ್ನು ಸದ್ಯ ಸ್ಥಗಿತಗೊಳಿಸಿದೆ. ಈ ನಿರ್ಧಾರವನ್ನು ಮೇಲ್ಮನವಿ ಸಲ್ಲಿಸಲು ನಟಿಗೆ 180 ದಿನಗಳ ಕಾಲಾವಕಾಶವನ್ನು ನೀಡಿದೆ. ಘಟನೆಗೆ ಸಂಬಂಧಿಸಿದಂತೆ ಉರ್ಫಿ ತಮ್ಮ ಇತರೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸ್ಕ್ರೀನ್​ ಶಾಟ್​ ಹಂಚಿಕೊಳ್ಳುವ ಮೂಲಕ ಅನುಯಾಯಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಉಡುಗೆ ತೊಡುವುದು, ಅಸಾಂಪ್ರದಾಯಿಕ ಫ್ಯಾಷನ್ ಆಯ್ಕೆಗಳಿಗೆ ಹೆಸರುವಾಸಿಯಾದ ಉರ್ಫಿ, ಸದಾ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಉಡುಗೆ-ತೊಡುಗೆಗಳಿಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುವ ನಟಿ, ವ್ಯಾಪಕ ಟೀಕೆಗಳು ಮತ್ತು ಆಕ್ರೋಶಕ್ಕೆ ತುತ್ತಾಗುತ್ತಾರೆ. ಇದೀಗ ಇನ್​ಸ್ಟಾಗ್ರಾಮ್ ನಟಿಯ ಅಧಿಕೃತ ಖಾತೆಯನ್ನು ಸ್ಥಗಿತಗೊಳಿಸುವ ಮೂಲಕ ಆಕೆಗೆ ಶಾಕ್​ ನೀಡಿದೆ.

ಸಾಮಾನ್ಯವಾಗಿ ನಗ್ನತೆ, ದ್ವೇಷಪೂರಿತ ಹೇಳಿಕೆಗಳು ಅಥವಾ ಬಳಕೆದಾರರ ವರದಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಇನ್​ಸ್ಟಾಗ್ರಾಮ್​ ಈ ರೀತಿಯ ಕ್ರಮಕ್ಕೆ ಮುಂದಾಗುತ್ತದೆ. ಆದ್ರೆ, ಉರ್ಫಿ ಖಾತೆಯನ್ನು ಅಮಾನತುಗೊಳಿಸಿರುವ ಕ್ರಮದ ಹಿಂದಿರುವ ಬಲವಾದ ಕಾರಣ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net